ಮುತಾಲಿಕ್ ವಿರುದ್ಧ ಬಸವರಾಜ್ ಸೂಳಿಬಾವಿ ಕೆಂಡಾಮಂಡಲ

basavaraj sulibhavi outrage against peamod mutalik

22-06-2018

ಗದಗ: ‘ಶ್ರೀರಾಮಸೇನಾ ಮುಖಂಡ ಪ್ರಮೋದ್‌ ಮುತಾಲಿಕ್ ಮತೀಯ ಹುಚ್ಚನಾಯಿ. ಧಾರ್ಮಿಕ ಅಂಧತ್ವ ತುಂಬಿಕೊಂಡಿರುವ ಹುಚ್ಚುನಾಯಿ' ಎಂದು ಮುತಾಲಿಕ್ ವಿರುದ್ಧ ಚಿಂತಕ ಹಾಗು ಗೌರಿ ಲಂಕೇಶ್, ಎಂ.ಎಂ.ಕಲ್ಬುರ್ಗಿ, ದಾಭೋಲ್ಕರ್, ಪನ್ಸಾರೆ ಹತ್ಯಾ ವಿರೋಧಿ ಹೋರಾಟ ಸಮಿತಿ ಮುಖಂಡ ಬಸವರಾಜ್ ಸೂಳಿಬಾವಿ ಕಟುವಾಕ್ಯಗಳಲ್ಲಿ ತೀವ್ರವಾಗಿ ಟೀಕಿಸಿದ್ದಾರೆ. ಗದಗನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುತಾಲಿಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶ್ರೀರಾಮಸೇನಾ ಮುಖ್ಯಸ್ಥ ಮುತಾಲಿಕ್ ಅವರ ವಿವಾದಾತ್ಮಕ ಹೇಳಿಕೆಗೆ ಆಕ್ರೋಶಗೊಂಡ ಅವರು, ಪ್ರಮೋದ್‌ ಮುತಾಲಿಕ್ ಅವರನ್ನು ಹುಚ್ಚನಾಯಿಗೆ ಹೊಲಿಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ‘ರಾಜ್ಯದಲ್ಲಿ ಯಾವುದೇ ನಾಯಿ ಸತ್ತರೂ ಪ್ರಧಾನಿಯವರ ಮೇಲೆ ಆರೋಪ  ಮಾಡುತ್ತಾರೆ’ ಎಂಬ ವಿವಾದಾತ್ಮಕ ಹೇಳಿಕೆ ಕುರಿತು ಕ್ರೌರ್ಯವನ್ನು ವಿಸ್ತರಿಸುತ್ತಿರುವ ಮುತಾಲಿಕ್ ಬಂಧಿಸಿ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನು ಗೌರಿ ಲಂಕೇಶ್ ಹತ್ಯೆ ಶಂಕಿತ ಆರೋಪಿ ಬಂಧನ ಹಿನ್ನೆಲೆ, ಎಸ್ಐಟಿ ತಂಡ ಹಾಗೂ ರಾಜ್ಯ ಸರ್ಕಾರಕ್ಕೆ ಅಭಿನಂದನೆ ತಿಳಿಸಿದರು. ಸಂಶೋಧಕ ಕಲ್ಬುರ್ಗಿ ಹತ್ಯೆ ಪ್ರಕರಣವನ್ನು ಸಿಒಡಿ ಬದಲು ಎಸ್ಐಟಿಗೆ ವಹಿಸುವಂತೆ ಒತ್ತಾಯಿಸಿದ್ದಾರೆ. ಬಂಧಿತ ಶಂಕಿತ ಹಂತಕರ ಹಿಂದಿರುವ ಸಂಘಟನೆ ಯಾವುದು ಎಂಬುದು ದೃಢಪಡಿಸಬೇಕು. ಹತ್ಯಗೆ ಪ್ರಚೋದನೆ ನೀಡಿದ ವ್ಯಕ್ತಿಗಳು ಹಾಗೂ ಸಂಘಟನೆಗಳನ್ನು ಬಹಿರಂಗ ಪಡಿಸಬೇಕು ಎಂದು ಆಗ್ರಹ ಮಾಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ