ಪಶು ಆಸ್ಪತ್ರೆಯಲ್ಲಿ ಕಂಪೌಂಡರ್ ವೈದ್ಯನಂತೆ!

In a veterinary hospital compounder is doctor!

22-06-2018

ದಾವಣಗೆರೆ: ಜಿಲ್ಲೆಯ ಜಗಳೂರು ತಾಲ್ಲೂಕಿನ ತೋರಣಗಟ್ಟೆಯಲ್ಲಿ ಸರ್ಕಾರಿ ಪಶುವೈದ್ಯೆ ನಿರ್ಲಕ್ಷ್ಯತೆ ವಿರುದ್ಧ ಗ್ರಾಮಸ್ಥರು ಗರಂ ಆಗಿದ್ದಾರೆ. ಸರ್ಕಾರಿ ನಿಯಮದಂತೆ ಬೆಳಿಗ್ಗೆ 9ರಿಂದ ಸಂಜೆ 5ಗಂಟೆಯವರೆಗೂ ಕೆಲಸ ಮಾಡಬೇಕು. ಆದರೆ, ತೋರಣಗಟ್ಟೆಯಲ್ಲಿ ಪಶುವೈದ್ಯೆ ತನಗಿಷ್ಟವಾದಾಗ ಆಸ್ಪತ್ರೆಗೆ ಬಂದು, ತನ್ನಿಷ್ಟದಂತೆ ವಾಪಾಸ್ ಹೋಗುತ್ತಾರೆ ಎಂದು ಗ್ರಾಮಸ್ಥರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಶುಗಳಿಗೆ ಸಂಬಂಧಿಸಿದಂತೆ ಔಷಧಿಗಳನ್ನು ಕೇಳಿದರೆ ಸ್ಟಾಕ್ ಇಲ್ಲ ಎಂಬ ಉಡಾಫೆ ಉತ್ತರ ನೀಡುತ್ತಾರೆ. ವೈದ್ಯರಿಲ್ಲದ ಸಮಯದಲ್ಲಿ ಕಂಪೌಂಡರ್ ಕೆಲಸ ನಿರ್ವಹಿಸುತ್ತಾರೆ. ಒಟ್ಟಾರೆ ವಾರಕ್ಕೊಮ್ಮೆ ಪಶು ಆಸ್ಪತ್ರೆಯತ್ತ ತೆರಳುವ ಸರ್ಕಾರಿ ವೈದ್ಯೆ ಅನಿತಾ ವಿರುದ್ಧ ಗ್ರಾಮಸ್ಥರು ಭಾರೀ ಸಿಟ್ಟುಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

veterinary government hospital ವೈದ್ಯ ಕಂಪೌಂಡರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ