ಪೊಲೀಸ್ ದಾಳಿಗೆ ಹೆದರಿ ಜೂಜುಕೋರನೊಬ್ಬ ಸತ್ತೇ ಹೋದ!

A gambler died when police raid!

22-06-2018

ಮೈಸೂರು: ಇಸ್ಪೀಟ್ ಆಡುತ್ತಿದ್ದ ತಂಡದ ಮೇಲೆ ಪೊಲೀಸರು ದಾಳಿ ಮಾಡಿದ ಹಿನ್ನೆಲೆ, ಪೊಲೀಸ್ ದಾಳಿಗೆ ಹೆದರಿದ ಜೂಜುಕೋರನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಮೈಸೂರಿನ ಸುನ್ನಿ ಚೌಕದಲ್ಲಿ ಘಟನೆ ಬೆಳಕಿಗೆ ಬಂದಿದೆ. ಕಳೆದ ಕೆಲ ದಿನಗಳಿಂದ ಸುನ್ನಿ ಚೌಕದ ಬಳಿ ಇಸ್ಪೀಟ್ ಆಡುತ್ತಿರುವುದಾಗಿ ಮಂಡಿ ಪೊಲೀಸ್ ಠಾಣೆಗೆ ಹಲವು ದೂರುಗಳು ಬಂದಿದ್ದವು. ದೂರಿನನ್ವಯ ನಿನ್ನೆ ಸಂಜೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಬಂಧಿತರ 8ಮಂದಿ ಪೈಕಿ ಓರ್ವ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಕೂಡಲೆ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬದುಕುಳಿಯಲಿಲ್ಲ. ಸಿರಾಜುದ್ದೀನ್ (41) ಮೃತ ದುರ್ದೈವಿ. ಟಿವಿ ಮೆಕ್ಯಾನಿಕ್ ಆಗಿದ್ದ ಸಿರಾಜುದ್ದೀನ್, ಮೈಸೂರಿನ ಮಂಡಿಮೊಹಲ್ಲಾ ನಿವಾಸಿ ಎಂದು ತಿಳಿದು ಬಂದಿದೆ. ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

Police Raid gambling ಹೆದರಿಕೆ ವರದಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ