ಮೋದಿ ಮೂರು ಬಾರಿ ಪ್ರಧಾನಿ ಆಗಬೇಕು: ಎಸ್‌.ಎಲ್.ಭೈರಪ್ಪ

Writer SL Bhyrappa appreciated the pm narendra modi!

22-06-2018

ಬೆಂಗಳೂರು: ಮೋದಿ ಅವರು ಒಂದು ಬಾರಿಯಲ್ಲ ಮೂರು ಬಾರಿ ಗೆದ್ದರೆ ಮಾತ್ರ ಭಾರತಕ್ಕೆ ಉಳಿಗಾಲ ಎಂದು ಸಾಹಿತಿ ಎಸ್‌.ಎಲ್.ಭೈರಪ್ಪ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾಲ್ಕು ವರ್ಷದಲ್ಲಿ ಭಾರತವನ್ನು ಉತ್ತಮವಾಗಿ ಅಭಿವೃದ್ಧಿ ‌ಮಾಡಿದ್ದಾರೆ. ಭವಿಷ್ಯದಲ್ಲಿ ಭಾರತವನ್ನು ಅಭಿವೃದ್ಧಿ ಪಡಿಸಲು ಶ್ರಮಿಸುತ್ತಿದ್ದಾರೆ. ಎರಡು ಮೂ‌ರು ಬಣಗಳು ಸೇರಿ ಮೋದಿಯನ್ನು ಸೋಲಿಸಲು ಪಣ ತೊಟ್ಟಿವೆ. ಮೋದಿಯನ್ನ ಸೋಲಿಸಿದರೆ ನಮ್ಮ ಮೂರ್ಖತನದ ಪರಮಾವಧಿ'ಎಂದು ಅಭಿಪ್ರಾಯ ಪಟ್ಟರು.

ನಮ್ಮ‌ ಶತ್ರು ರಾಷ್ಟ್ರಗಳಾದ ಚೀನಾ‌ ಮತ್ತು ಪಾಕಿಸ್ತಾನ ಮೋದಿಯಿಂದ ಹಿಂದೆ ಸರಿದಿವ. ಮೋದಿ ಬೇರೆ ಬೇರೆ ರಾಷ್ಟ್ರಗಳ ಪ್ರೀತಿ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಹಿಂದೆ ಇದ್ದ ಯುಪಿಎ ಸರ್ಕಾರದಲ್ಲಿ ಏನು ಸಾಧನೆ‌ ಮಾಡಿದರು ಎಂದು ಪ್ರಶ್ನಿಸಿದ್ದಾರೆ. ಯಾವುದೇ ಒಂದು  ಕೆಲಸ ಮಾಡಲು ಮೇಡಂ ಅಂತ ಅವರ ಹಿಂದೆ‌ ಹೋಗುತ್ತಿದ್ದರು. ಇಂತಹವರು ಬೇಕಾ ನಿಮಗೆ? ಅಥವ ದೇಶದ ಅಭಿವೃದ್ಧಿ ಮಾಡುವವರು ಬೇಕಾ? ಮೋದಿಯನ್ನು ದ್ವೇಷಿಸುವ ಬದಲು ಅವರ ಕೆಲಸವನ್ನ ಪ್ರೀತಿಸಿ ಎಂದು ಮೋದಿ ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ