ಚಿಂದಿ ಆಯುತ್ತಿದ್ದ, ಭಿಕ್ಷೆ ಬೇಡುತ್ತಿದ್ದ ಮಕ್ಕಳ ರಕ್ಷಣೆ

17 children rescued in bidar

22-06-2018

ಬೀದರ್: ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ ಮತ್ತು ಪೊಲೀಸರು ಇಂದು ಬೆಳಿಗ್ಗೆಯೇ ರೇಡ್ ಗೆ ಇಳಿದಿದ್ದರು. ಶಾಲೆ ಬಿಟ್ಟು ಚಿಂದಿ ಆಯುತಿದ್ದ, ಭಿಕ್ಷೆ ಬೇಡುತಿದ್ದ ಮತ್ತು ಹೋಟೆಲ್ ನಲ್ಲಿ ಕೆಲಸ ಮಾಡುತಿದ್ದ ಮಕ್ಕಳ ರಕ್ಷಣೆ ಮಾಡಿದ್ದಾರೆ ಪೊಲೀಸರು. ಬೀದರ್ ನಗರದ ಅಂಬೇಡ್ಕರ್ ಸರ್ಕಲ್, ಚಿದ್ರಿ ರೋಡ್, ಗಾಂಧಿ ಗಂಜ್, ರೈಲ್ವೆ ಸ್ಟೇಷನ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ರೇಡ್ ಮಾಡಿ 17ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.

ಈ ಮಕ್ಕಳೆಲ್ಲ ಶಾಲೆ ಬಿಟ್ಟು ಹೋಟೆಲ್ ಮತ್ತು ಭಿಕ್ಷಾಟನೆ, ಚಿಂದಿ ಆಯುವಲ್ಲಿ ತೊಡಗಿದ್ದವರು. ಸರಿಸುಮಾರು ಎಲ್ಲರು 14 ವರ್ಷದೊಳಗಿನ 12 ಗಂಡು 5 ಹೆಣ್ಣು ಮಕ್ಕಳನ್ನು ರಕ್ಷಿಸಿದ್ದಾರೆ. ಮಕ್ಕಳೆಲ್ಲರನ್ನು ಬಾಲಭವನಕ್ಕೆ ಸೇರಿಸಿದ್ದಾರೆ ಅಧಿಕಾರಿಗಳು.


ಸಂಬಂಧಿತ ಟ್ಯಾಗ್ಗಳು

children Bal Bhavan ಮಕ್ಕಳ ರಕ್ಷಣಾ ಘಟಕ ಭಿಕ್ಷೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ