ಬಿಹಾರ ರೈಲ್ವೆ ನಿಲ್ದಾಣದಲ್ಲಿ ನಕ್ಸಲರ ವಿಧ್ವಂಸಕ ಕೃತ್ಯ !

Kannada News

26-05-2017

ಜಾರ್ಖಂಡ್‌:- ಕಳೆದ ರಾತ್ರಿ ಜಾರ್ಖಂಡ್‌ ನ ಬೊಕಾರೋ ಬಳಿಯ ದುರ್ಮಿ ಬಿಹಾರ ರೈಲ್ವೆ ನಿಲ್ದಾಣದಲ್ಲಿ ನಕ್ಸಲರು ವಿಧ್ವಂಸಕ ಕೃತ್ಯ ಎಸಗಿದ್ದಾರೆ. ರಾತ್ರಿ 11:30ರ ಸುಮಾರಿಗೆ ರೈಲ್ವೆ ನಿಲ್ದಾಣದ ಮೇಲೆ ದಾಳಿ ಮಾಡಿ ರೈಲ್ವೆ ಸಿಗ್ನಲ್‌ ಸೆಟ್‌, ಕಮ್ಯುನಿಕೇಶನ್ ಸಿಸ್ಟೆಮ್‌ಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೇ, ಗೂಡ್ಸ್‌‌ ಟ್ರೈನ್‌ನ ಎಂಜಿನ್‌ಗೆ ನಕ್ಸಲರು ಹಾನಿ ಮಾಡಿದ್ದಾರೆ. ಈ ಘಟನೆ ಬಗ್ಗೆ ಇಂದು ಮಾಹಿತಿ ಪಡೆದ ಪೊಲೀಸರು, ತಕ್ಷಣವೇ ಸಿಆರ್‌ಪಿಎಫ್‌ನ 26 ಬೆಟಾಲಿಯನ್‌ನ ಕಮಾಂಡೆಂಟ್ ಹಾಗೂ ಬೊಕಾರೋ ಎಸ್‌ಪಿ ನೇತೃತ್ವದ ತಂಡ ಭೇಟಿ ನೀಡಿದ್ದು, ನಕ್ಸಲರ ಈ ದೃಷ್ಕೃತ್ಯದ ಬಗ್ಗೆ ತನಿಖೆಗೆ ಮುಂದಾಗಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ