ಸಭಾಪತಿ ಶಂಕರಮೂರ್ತಿ ಅವಧಿ ಮುಕ್ತಾಯ

Today is last day of D.H Shankaramurthy as chairman of legislative council

21-06-2018

ಬೆಂಗಳೂರು: ಮೇಲ್ಮನೆ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಅವರ ಸೇವಾವಧಿ ಇಂದಿಗೆ ಮುಕ್ತಾಯಗೊಂಡಿದೆ. ಕಳೆದ ಆರು ವರ್ಷಗಳಿಂದ ವಿಧಾನಪರಿಷತ್​ ಸಭಾಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಿ.ಹೆಚ್.ಶಂಕರಮೂರ್ತಿ ಸೇವಾ ಅವಧಿ ಇಂದು ಕೊನೆಯಾಗಿದೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್​ ಸಭಾಪತಿಯಾಗಿ ಇಂದು ನನಗೆ ಕೊನೇ ದಿನ. ನನ್ನ ಕೆಲಸ ಪೂರ್ತಿಗೊಳಿಸಿ ಹೋಗುತ್ತಿದ್ದೇನೆ ಎನ್ನುವ ಖುಷಿ ಇದೆ. ಕಹಿ, ಸಂತೋಷದ ಅನೇಕ ಘಟನಾವಳಿಗಳು ನಡೆದಿವೆ. ಆದರೆ ಕೆಲವು ವಿಷಯಗಳ ಕುರಿತು ಆಸೆ ಪಟ್ಟಿದ್ದೆ, ಟೀಕೆ ಮಾಡಿದ್ದೆ. ಜೊತೆಗೆ ದೊಡ್ಡ ಪ್ರಮಾಣದಲ್ಲಿ ಯಶಸ್ಸು ಕಂಡಿದ್ದೇನೆ ಎಂದರು.

ಇನ್ನು ವಿಧಾನಸೌಧದ ಆವರಣದಲ್ಲಿ ಗಾಂಧಿ ಪ್ರತಿಮೆ ಸ್ಥಾಪಿಸಿದ ಖುಷಿಯಿದೆ. ಹುದ್ದೆಯಿಂದಷ್ಟೇ ನಿವೃತ್ತಿಯಾಗಿದ್ದೇನೆ. ಹೊರತು ರಾಜಕೀಯದಿಂದ ನಿವೃತ್ತಿಯಾಗಲ್ಲ. ರಾಷ್ಟ್ರೀಯ ಅಧ್ಯಕ್ಷರು ರಾಜ್ಯಪಾಲರ ಹುದ್ದೆ ಕೊಡುತ್ತೇನೆ ಎಂದಿದ್ದರು. ನಾನು ಕೂಡ ಇದಕ್ಕೆ ಸಮ್ಮತಿ ಸೂಚಿಸಿದ್ದೆ. ಆದರೆ, ಹುದ್ದೆ ಸಿಗಲಿಲ್ಲ. ಇದರಿಂದಾಗಿ ಯಾವುದೇ ಬೇಸರವಿಲ್ಲ ಎಂದು ಸ್ಪಷ್ಟಪಡಿಸಿದರು. ಮುಂದಿನ ಅವಕಾಶದ ಕುರಿತು ಮಾತುಕತೆ ಕುರಿತು ಇನ್ನಷ್ಟೆ ನಿರ್ಧಾರವಾಗಲಿದೆ.

ಶಂಕರಮೂರ್ತಿ ಅವರು ನೈಋತ್ಯ ಪದವೀಧರ ಕ್ಷೇತ್ರದಿಂದ 1988ರಿಂದ ಪರಿಷತ್​ ಸದಸ್ಯರಾಗಿದ್ದ ಅವರು 1994, 2000,2006,2012ರಲ್ಲಿ ನಿರಂತರವಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. 2006ರಲ್ಲಿ ಬಿಜೆಪಿ-ಜೆಡಿಎಸ್​ ಮೈತ್ರಿ ಸರ್ಕಾರದಲ್ಲಿ ಅವರು ಉನ್ನತ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 2010ರಲ್ಲಿ ವಿಧಾನಪರಿಷತ್​ ಸದಸ್ಯರಾಗಿ ಆಯ್ಕೆಯಾದ ಇವರ ವಿರುದ್ಧ 2017ರಲ್ಲಿ ಕಾಂಗ್ರೆಸ್​ ಅವಿಶ್ವಾಸ ಗೊತ್ತುವಳಿಗೆ ಮುಂದಾಗಿದ್ದು, ಜೆಡಿಎಸ್​ ಬೆಂಬಲ ನೀಡಿದ ಹಿನ್ನೆಲೆ ಇದು ಸಾಧ್ಯವಾಗಿರಲಿಲ್ಲ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ