ದೊಣ್ಣೆ,ಮಚ್ಚುಗಳಿಂದ ಬೆದರಿಸಿ ಚಿನ್ನಾಭರಣ ದರೋಡೆ

24 grams of gold robbery by 20 people at doddaballapur

21-06-2018

ಬೆಂಗಳೂರು: ದೊಡ್ಡಬಳ್ಳಾಪುರದ ಮಲ್ಲತ್ತಹಳ್ಳಿ ಬಳಿ ನಿನ್ನೆ ಸಂಜೆ ಜಮೀನಿನಲ್ಲಿ ಪೂಜೆ ಮಾಡಲು ಹೋಗುತ್ತಿದ್ದ ಸಂತೋಷ್, ಗೋಪಿ, ಮಂಜುನಾಥ್, ನಾಗೇಶ್, ತ್ರಿಭುವನ್, ರೇವಂತ್ ಅವರನ್ನು ದೊಣ್ಣೆ, ಮಚ್ಚುಗಳನ್ನು ಹಿಡಿದು ಬಂದ 20 ದುಷ್ಕರ್ಮಿಗಳು ಬೆದರಿಸಿ ಚಿನ್ನಾಭರಣ, ನಗದನ್ನು ದೋಚಿ ಪರಾರಿಯಾಗಿದ್ದಾರೆ. ಮಂಜುನಾಥ್ ಬಳಿ ಇದ್ದ 24ಗ್ರಾಂ. ಚಿನ್ನದ ಸರ, ರೇವಂತ್ ಕೈಯಲ್ಲಿದ್ದ 8ಗ್ರಾಂ. ಉಂಗುರ, ನಗದನ್ನು ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿರುವ ದೊಡ್ಡಬಳ್ಳಾಪುರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Gold attack ತನಿಖೆ ಜಮೀನು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ