ಕುಟುಂಬವೊಂದಕ್ಕೆ ಜೀವನಾಧಾರವಾಗಿದ್ದದ್ದನ್ನೇ ಕದ್ದೊಯ್ದ ಕಳ್ಳರು?

An cow kidnaped in a car!

21-06-2018

ಬೆಂಗಳೂರು: ಕುಟುಂಬಕ್ಕೆ ಆಧಾರವಾಗಿದ್ದ ಹಸುವನ್ನು ದುಷ್ಕರ್ಮಿಗಳು ಟಾಟಾ ಸುಮೋ ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಿರುವ ದುರ್ಘಟನೆ ಹೆಚ್‍ಎಎಲ್ ನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಹೆಚ್‍ಎಎಲ್ ನ ವಿಜ್ಞಾನ ನಗರದಲ್ಲಿ ಕಳೆದ ಜೂ,13ರಂದು ಮುಂಜಾನೆ ಈ ಘಟನೆ ನಡೆದಿದ್ದು, ಲಕ್ಷ್ಮೀ ಮತ್ತು ಏಳು ಮಲೈ ದಂಪತಿ ಸಾಕುತ್ತಿದ್ದ ಹಸುವನ್ನು ದುಷ್ಕರ್ಮಿಗಳು ಕಳವು ಮಾಡಿ ಪರಾರಿಯಾಗಿದ್ದಾರೆ.

ಏಳುಮಲೈ ಕುಟುಂಬ ಹಸುವನ್ನು ಬಳಸಿಕೊಂಡು ಬಂಡಿ ಓಡಿಸುವ ಮೂಲಕ ಜೀವನ ಸಾಗಿಸುತ್ತಿತ್ತು. ಆದರೀಗ ಕುಟುಂಬಕ್ಕೆ ಆದಾಯದ ಮೂಲವಾಗಿದ್ದ ಹಸುವನ್ನು ಕಳ್ಳರು ಕದ್ದೊಯ್ದಿದ್ದಾರೆ. ಕೇವಲ ಹತ್ತೇ ನಿಮಿಷದಲ್ಲಿ ಹಸು ಕದ್ದು ಕಾರಿನಲ್ಲಿ ತುಂಬಿಕೊಂಡು ಕಳ್ಳರು ಪರಾರಿಯಾದ ಖತರ್ನಾಕ್ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿರುವ ಹೆಚ್‍ಎಎಲ್ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Cow Robbery ಹಸು ಟಾ ಸುಮೋ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ