ವ್ಯಕ್ತಿಗೆ ಸ್ಕೂಟರ್ ನಿಂದ ಡಿಕ್ಕಿ ಹೊಡೆದರು, ಹಣ ಲಪಟಾಯಿಸಿದರು!

anekal: 12 lakh money Robbery?

21-06-2018

ಬೆಂಗಳೂರು: ಆನೇಕಲ್‍ ನ ಗುಟ್ನಹಳ್ಳಿ ಕೆರೆ ಕಟ್ಟೆಯ ಬಳಿ ನಿನ್ನೆ ರಾತ್ರಿ ಬೈಕ್‍ನಲ್ಲಿ ಹೋಗುತ್ತಿದ್ದ ಕೋಳಿಫಾರಂ ಮಾಲೀಕನಿಗೆ ಸ್ಕೂಟರ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಡಿಕ್ಕಿ ಹೊಡೆದು ಕೆಳಗೆ ಬೀಳಿಸಿ 12ಲಕ್ಷ 70 ಸಾವಿರ ಹಣವಿದ್ದ ಬ್ಯಾಗ್ ದೋಚಿ ಪರಾರಿಯಾಗಿದ್ದಾರೆ.

ಗುಡ್ಡನಹಳ್ಳಿಯ ಅಂಕಯ್ಯ ಅವರು ಕೋಳಿಫಾರಂ ನಡೆಸುತ್ತಿದ್ದು, ನಿನ್ನೆ ಇಬ್ಬರು ಕೋಳಿ ವ್ಯಾಪಾರಿಗಳು ಕೋಳಿಗಳನ್ನು ಖರೀದಿಸಿ ನೀಡಿದ್ದ 12 ಲಕ್ಷ 70 ಸಾವಿರ ಹಣವನ್ನು ರಾತ್ರಿ 7ರ ಸುಮಾರಿನಲ್ಲಿ ಬೈಕ್‍ನಲ್ಲಿ ತೆಗೆದುಕೊಂಡು ಮನೆಗೆ ಹೋಗುತ್ತಿದ್ದರು.

ಮಾರ್ಗಮಧ್ಯೆ ಗುಟ್ನಹಳ್ಳಿಯ ಕೆರೆ ಕಟ್ಟೆಯ ತಿರುವಿನಲ್ಲಿ ಇಬ್ಬರು ಕೆನೆಟಿಕ್ ಹೋಂಡಾ ಸ್ಕೂಟರ್ ನಲ್ಲಿ ಬಂದ ದುಷ್ಕರ್ಮಿಗಳು ಅಂಕಯ್ಯ ಅವರ ಬೈಕ್‍ಗೆ ಡಿಕ್ಕಿ ಹೊಡೆದಿದ್ದಾರೆ. ಗಾಯಗೊಂಡ ಅಂಕಯ್ಯ ಅವರು ಕೆಳಗೆ ಬಿದ್ದು ರಕ್ಷಣೆಗಾಗಿ ಕೂಗಿಕೊಳ್ಳುತ್ತಿರುವಾಗಲೇ ಅವರ ಬೈಕ್‍ನ ಪೆಟ್ರೋಲ್ ಟ್ಯಾಂಕ್ ಮೇಲಿಟ್ಟುಕೊಂಡಿದ್ದ ಹಣವಿದ್ದ ಬ್ಯಾಗ್‍ನ್ನು ದೋಚಿ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿರುವ ಆನೇಕಲ್ ಪೊಲೀಸರು ದುಷ್ಕರ್ಮಿಗಳಿಗಾಗಿ ತೀವ್ರಶೋಧ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Bike Robbery ಸ್ಕೂಟರ್ ಕೋಳಿಫಾರಂ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ