ಸಿದ್ದರಾಮಯ್ಯ ವಾಚ್ ಪ್ರಕರಣ ಬಿಡಲ್ಲ ಎಂದ ಶಣೈ!

Anupama shenoy again comment on siddaramaiah watch case

21-06-2018

ಹಾವೇರಿ: ‘ಇನ್ಮುಂದೆ ‌ತಮ್ಮ ಕೆಲಸ ಪಕ್ಷ ಸಂಘಟನೆ ಮಾಡುವುದಷ್ಟೇ ಎಂದು 'ಭಾರತೀಯ ಜನಶಕ್ತಿ ಕಾಂಗ್ರೆಸ್' ಪಕ್ಷದ ಸಂಸ್ಥಾಪಕಿ ಅನುಪಮಾ ಶಣೈ ಹೇಳಿದ್ದಾರೆ. ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಸಂಘಟನೆಗಾಗಿ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಅವರಿಗೆ ಎಲ್ಲ ರೀತಿಯ ಶಕ್ತಿ ನೀಡಲಾಗಿದೆ' ಎಂದು ತಿಳಿಸಿದರು. ಇದೇ ವೇಳೆ  ಮುಂದಿನ ಲೋಕಸಭಾ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ. ಆದರೆ, ಬಲವಾದ ಹಾಗೂ ಎಲ್ಲ ರೀತಿಯಲ್ಲಿ ಗಟ್ಟಿಯಾದ ಅಭ್ಯರ್ಥಿಗಳು ಸಿಕ್ಕರೆ ಸ್ಪರ್ಧೆ ಮಾಡುತ್ತೆವೆ ಎಂದರು.

ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ವಾಚ್ ಪ್ರಕರಣ ಕುರಿತು, 'ನಾವು ಸಲ್ಲಿಸಿದ್ದ ಪಿಐಎಲ್ ಅರ್ಜಿ ವಜಾಗೊಂಡಿದೆ, ಇದಕ್ಕೆ ಕಾರಣ ನಮ್ಮ ವಕೀಲರು. ನ್ಯಾಯಾಧೀಶರು ಕೇಳಿದ ಎರಡು ಪ್ರಶ್ನೆಗಳಿಗೂ ಸಮಂಜಸ ಉತ್ತರ ನೀಡಲಿಲ್ಲ ಹೀಗಾಗಿ ಅರ್ಜಿ ವಜಾಗೊಂಡಿದೆ. ಮತ್ತೆ ಬೇರೆ ಮಾರ್ಗ ಮೂಲಕ ಅರ್ಜಿ ಸಲ್ಲಿಸುತ್ತೇವೆ. ಈ ಪ್ರಕರಣ ನಾವು ಇಲ್ಲಿಗೆ ಬಿಡೋದಿಲ್ಲ ಎಂದು ಖಡಕ್ಕಾಗಿ ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ