ಚಲಿಸುತ್ತಿದ್ದ ಬಸ್ ಗೆ ಬೆಂಕಿ ತಗುಲಿ 8 ಮಂದಿ ಸಜೀವ ದಹನ !

Kannada News

26-05-2017

ಬಿಹಾರ:  ಚಲಿಸುತ್ತಿದ್ದ ಬಸ್ ಗೆ ಬೆಂಕಿ ತಗುಲಿ 8 ಮಂದಿ ಸಜೀವ ದಹನವಾದ ಕುಟುಂಬದವರಿಗೆ  ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ 2 ಲಕ್ಷ ಪರಿಹಾರ  ಘೋಷಿಸಿದ್ದಾರೆ. ಬಿಹಾರದ ನಳಂದ ಜಿಲ್ಲೆಯ ಶೇಖ್ ಪುರದಿಂದ ಪಾಟ್ನಾಕ್ಕೆ ತೆರಳುತ್ತಿದ್ದ ಬಸ್, ಹನೌತ್ ಬಜಾರ್ ಬಳಿ ಬರುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಇಡೀ ಬಸ್ ಗೆ ವ್ಯಾಪಿಸಿತ್ತು. ಸ್ಥಳೀಯರು ಬಸ್ ನಲ್ಲಿದ್ದವರನ್ನು ರಕ್ಷಿಸುವ ಪ್ರಯತ್ನ ನಡೆಸಿದರೂ, ಕೆಲವೇ ಕ್ಷಣದಲ್ಲಿ ಬಸ್ ಗೆ ಬೆಂಕಿ ಆವರಿಸಿ ನೋಡನೋಡುತ್ತಿದ್ದಂತೆ ಹೊತ್ತಿ ಉರಿದಿತ್ತು. ಘಟನೆಯಲ್ಲಿ 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಬಾಳೆಹಣ್ಣು, ಮಾವಿನಕಾಯಿಗಳನ್ನು ಕೃತಕವಾಗಿ ಹಣ್ಣಾಗಿಸುವ ದಹನಶೀಲ ವಸ್ತುಗಳನ್ನು ಬಸ್ ನಲ್ಲಿ ಕೊಂಡೊಯ್ಯಲಾಗುತ್ತಿದ್ದು, ಆಕಸ್ಮಿಕವಾಗಿ ಬೆಂಕಿ ತಗುಲಿ ಬಸ್ ಹೊತ್ತಿ ಕೊಂಡಿದೆ ಎಂದು ತಿಳಿದು ಬಂದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ