ಇಕ್ಬಾಲ್ ಅನ್ಸಾರಿ ವಿರುದ್ಧ ಶಾಸಕ ಮುನ್ನವಳ್ಳಿ ತೀವ್ರ ವಾಗ್ದಾಳಿ

Iqbal ansari vs paranna munavalli

21-06-2018

ಕೊಪ್ಪಳ: ‘5 ವರ್ಷ ಹೊಲಸು ತಿನ್ನೋದನ್ನ ಇಕ್ಬಾಲ್ ಅನ್ಸಾರಿ ಕಲಿತಿದ್ದಾರೆ. ಅನ್ಸಾರಿ ಬ್ಲಾಕ್ ಮೇಲ್ ತಂತ್ರ ಮೊದಲು ಬಿಡಲಿ' ಎಂದು ಗಂಗಾವತಿ ಶಾಸಕ ಪರಣ್ಣ ಮುನ್ನವಳ್ಳಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖೋಟಾ ನೋಟು ಬಗ್ಗೆ ಎಂತಹ ತನಿಖೆ ನಡೆಸಿದರೂ ನಾನು ಸಿದ್ಧ. ಇಕ್ಬಾಲ್ ಅನ್ಸಾರಿ ಎಸ್.ಪಿ. ಬಗ್ಗೆ ಸುಖಾಸುಮ್ಮನೆ ಆರೋಪ ಮಾಡುತ್ತಾರೆ, ಎಸ್.ಪಿ. ಬಂದಾಗಿನಿಂದ ಗಂಗಾವತಿಯಲ್ಲಿ ಅನ್ಸಾರಿ ಅಕ್ರಮ ಬಂದ್ ಆಗಿದೆ. ಮಟ್ಕಾ, ಅಕ್ರಮ ಮದ್ಯ, ಸೇರಿದಂತೆ ಅಕ್ರಮ ಚಟುವಟಿಕೆಯಲ್ಲಿ ಅನ್ಸಾರಿ ಭಾಗಿಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇಕ್ಬಾಲ್ ಅನ್ಸಾರಿ ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾರೆ, ಆದ್ದರಿಂದ ಇನ್ಮುಂದೆ ನಾನೂ ಸಹ ಅವರ ಬಗ್ಗೆ ಏಕವಚನದಲ್ಲಿ ಮಾತನಾಡುತ್ತೇನೆ ಎಂದು ಕಿಡಿಕಾರಿದರು.


ಸಂಬಂಧಿತ ಟ್ಯಾಗ್ಗಳು

Iqbal ansari paranna munavalli ಹೊಲಸು ಗಂಭೀರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ