ಬಿಜೆಪಿ ನಾಯಕರ ಬಗ್ಗೆ ಮಾತನಾಡೋಕೆ ಸಾಕಷ್ಟು ವಿಷಯ ಇದೆ:ಡಿಕೆಶಿ

There is a lot to speak about BJP leaders: DKS

21-06-2018

ಬೆಂಗಳೂರು: ‘ನ್ಯಾಯಲಯದಿಂದ ನನಗೆ ಯಾವುದೇ ನೋಟಿಸ್ ಬಂದಿಲ್ಲ, ದೆಹಲಿಯಲ್ಲಿ ಪಿ.ಎ.ಆಂಜನೇಯ‌ ಮನೆಯಲ್ಲಿ‌ ಸಿಕ್ಕ ಹಣಕ್ಕೂ ನನಗೂ ಯಾವ ಸಂಬಂಧವೂ ಇಲ್ಲ. ನೀವೇ ಮಾಧ್ಯಮಗಳಲ್ಲಿ ಜನರಿಗೆ ಬೇಕಾದ ರಂಜನೆ ಕೊಡ್ತಾ ಇದ್ದೀರ‌, ಕೊಡಿ’ ಎಂದು ಸಚಿವ ಡಿ.ಕೆ.ಶಿವಕುಮಾರ್ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.

ಬೆಂಗಳೂರಿನ ಸದಾಶಿವ ನಗರದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ‘ಈ ಎಲ್ಲಾ ಬೆಳವಣಿಗೆಗಳಿಂದ ನಿಜಕ್ಕೂ ನನಗೆ ಶಾಕ್ ಆಗಿದೆ. ನಾನು ಇದ್ಯಾವುದರ ಬಗ್ಗೆಯೂ ಮಾತನಾಡಲ್ಲ. ದೆಹಲಿಯಲ್ಲಿ ಎರಡು ಬೆಡ್ ರೂಂ ಫ್ಲಾಟ್ ಇದೆ. ಶೀಘ್ರದಲ್ಲೇ ಇನ್ನೊಂದು ಮನೆ ಉದ್ಘಾಟನೆಯೂ ಇದೆ. ಅದು ನಾನು ಆಗಾಗ ದೆಹಲಿಗೆ ಹೋದಾಗ ರೆಸ್ಟ್ ಮಾಡೋಕೆ. ಅಲ್ಲಿ ಯಾವುದೇ ಹವಾಲಾ ದಂಧೆ ನಡೆಸುತ್ತಿಲ್ಲ. ನ್ಯಾಯಾಲಯದ ಮೇಲೆ ವಿಶ್ವಾಸವಿದೆ ಎಂದು ತೀಕ್ಷವಾಗಿ ಪ್ರತಿಕ್ರಿಯೆ ನೀಡಿದರು.

ಬಿಜೆಪಿ ನಾಯಕರ ಬಗ್ಗೆ ಮಾತಾಡೋಕೆ ಸಾಕಷ್ಟು ವಿಷಯ ಇದೆ. ಶೋಭಾ ಕರಂದ್ಲಾಜೆ ಹೇಳಿಕೆಯ ಬಗ್ಗೆಯೂ ಪ್ರತಿಕ್ರಿಯೆ ನೀಡಲ್ಲ. ಅವರಿಗೆ ಆಲ್ ದಿ ಬೆಸ್ಟ್ ಹೇಳ್ತೀನಿ. ಬಿಜೆಪಿಯಲ್ಲಿ ಸಾಕಷ್ಟು ಉದ್ಯಮಿಗಳು, ಹೋಟೆಲ್ ಮಾಲೀಕರಿದ್ದಾರೆ. ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು ಇದ್ದಾರೆ. ಆದರೆ ಎಲ್ಲದಕ್ಕೂ ಕಾಲ, ಶುಭಕಾಲ, ಶುಭ ಮಹೂರ್ತ ಬರಬೇಕು. ಈಗ ನಾನು ಇದ್ಯಾವುದರ ಬಗ್ಗೆಯೂ ಮಾತನಾಡಲ್ಲ. ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ ಎಂದು ಬಿಜೆಪಿ ನಾಯಕರಿಗೆ ಶಿವಕುಮಾರ್ ಟಾಂಗ್ ನೀಡಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ