‘ಯೋಗ ಎಲ್ಲಾ ಜಾತಿ, ಮತ, ಪಂಥಗಳನ್ನು ಮೀರಿದ್ದು’21-06-2018

ಬೆಂಗಳೂರು: ವಿಶ್ವ ಯೋಗದಿನದಂದು ಮಾತನಾಡಿದ ಕೇಂದ್ರ ಸಚಿವ ಅನಂತ್ ಕುಮಾರ್, ಯೋಗವನ್ನು ಪ್ರಧಾನಿ ನರೇಂದ್ರ ಮೋದಿಯವರು ವಿಶ್ವ ವ್ಯಾಪಿಗೊಳಿಸಿದ್ದಾರೆ. ಪ್ರಧಾನಿ ಮೋದಿ ಅವರು ವಿಶ್ವ ಸಂಸ್ಥೆಯಲ್ಲಿ ಯೋಗ ದಿನದ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದರು. 177 ದೇಶಗಳು ಪ್ರಸ್ತಾವನೆಯನ್ನು ಬೆಂಬಲಿಸಿದವು ಎಂದರು.

ಯೋಗ ಯಾವುದೇ ಜಾತಿಗೂ ಸಂಬಂಧಿಸದ್ದಲ್ಲ, ಯೋಗ ಎಲ್ಲಾ ಜಾತಿ, ಮತ, ಪಂಥಗಳನ್ನು ಮೀರಿದ್ದು. ಬಾಲ್ಯದಿಂದಲೂ ನನ್ನ ಜೀವನದಲ್ಲಿ ಯೋಗ ಹಾಸು ಹೊಕ್ಕಾಗಿದೆ. ನನ್ನ ರಾಜಕೀಯ ಹಾಗೂ ಸಾರ್ವಜನಿಕ ಜೀವನದಲ್ಲಿ ನನ್ನ ಆರೋಗ್ಯ ಕಾಪಾಡಿರುವುದು ಯೋಗ. ನೀವೂ ಕೂಡ ನಿಮ್ಮ ಜೀವನದಲ್ಲಿ ಇದನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.


ಸಂಬಂಧಿತ ಟ್ಯಾಗ್ಗಳು

Ananth Kumar Yoga Day ವಿಶ್ವ ಸಂಸ್ಥೆ ರಾಜಕೀಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ