ವಿಶ್ವ ಯೋಗ ದಿನ:ಮುಖ್ಯಮಂತ್ರಿ ಗೈರು

CM kumaraswamy not attended the yoga day!

21-06-2018

ಬೆಂಗಳೂರು: ರಾಜ್ಯ ಸರ್ಕಾರದ ವತಿಯಿಂದ ಆರೋಗ್ಯ ಇಲಾಖೆ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗೈರುಹಾಜರಾದರು.

ಮಾಜಿ ಪ್ರಧಾನಿ ದೇವೇಗೌಡರು ಮನೆಯಲ್ಲಿ ಯೋಗಾಸನ ಮಾಡಿದರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಕಚೇರಿ ಮುಂಭಾಗದಲ್ಲಿ‌ ಯೋಗಾಸನ ಮಾಡಿದರು. ಮಾಜಿ ಸಿಎಂ ಸಿದ್ದರಾಮಯ್ಯ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ‌ ಯೋಗ ಮಾಡಿದರು. ಆದರೆ, ಸಿಎಂ ಕುಮಾರಸ್ವಾಮಿ ಮಾತ್ರ ಏಕೋ ಯೋಗಾಸನದಿಂದ ದೂರ ಉಳಿದರು. ಇದಕ್ಕೆ ಕಾರಣ ಈವರೆಗೆಗೊತ್ತಾಗಿಲ್ಲ. ಅನಾರೋಗ್ಯ ಕಾರಣ ಎನ್ನಲಾಗುತ್ತಿದೆ .

ಸಿಎಂ ಅನುಪಸ್ಥಿತಿಯಲ್ಲಿಯೇ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ‌ ನಡೆದ ಯೋಗ ದಿನಾಚರಣೆಯಲ್ಲಿ ಮೇಯರ್ ಸಂಪತ್ ರಾಜ್, ವಿಧಾನಪರಿಷತ್ ಸಭಾಪತಿ ಡಿ.ಹೆಚ್.ಶಂಕಮೂರ್ತಿ, ಸಚಿವರಾದ ಯುಟಿ ಖಾದರ್, ಶಿವಾನಂದ ಪಾಟೀಲ್ ಸೇರಿದಂತೆ ಹಲವರು ಯೋಗಭ್ಯಾಸ ಮಾಡಿದರು. ಶ್ವಾಸಗುರು ವನಚಾನಂದ ಸ್ವಾಮೀಜಿ ಪ್ರಾಣಯಾಮ, ಧ್ಯಾನದ ಅಭ್ಯಾಸ ಮಾಡಿಸಿದರು. ಸಾವಿರಾರು ಸಂಖ್ಯೆಯ ಯೋಗಾಸಾಕ್ತರು ಭಾಗಿಯಾಗಿ ಯೋಗ ದಿನಕ್ಕೆ ಮೆರುಗು ನೀಡಿದರು.


ಸಂಬಂಧಿತ ಟ್ಯಾಗ್ಗಳು

H.D.kumaraswamy Yoga day ಆರೋಗ್ಯ ಇಲಾಖೆ ಯೋಗಾಸನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ