ತುಂಗಭದ್ರ ಜಲಾಶಯ ಭರ್ತಿಗೆ ಕೇವಲ 30ಅಡಿ ಬಾಕಿ

only 30 feet left for fill the tungabhadra reservoir

20-06-2018

ಬೆಂಗಳೂರು: ರಾಜ್ಯದ ಎರಡನೇ ಬೃಹತ್ ತುಂಗಭದ್ರ ಜಲಾಶಯದ ಜಲಾನಯನ ಪ್ರದೇಶದಲ್ಲಿ ಬಿದ್ದ ಭಾರೀ ಮಳೆಯಿಂದ ಈಗ ಜಲಾಶಯದ ಮಟ್ಟ 1603 ಅಡಿಗೆ ತಲುಪಿದ್ದು, ಜಲಾಶಯದಲ್ಲಿ 24 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ಒಂದು ವಾರದಿಂದ ದಿನೇ ದಿನೇ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚುತ್ತಿದ್ದು, 52 ಸಾವಿರ ಕ್ಯೂಸೆಕ್ ವರೆಗೆ ದಾಟಿತ್ತು. ಈಗ 7,500 ಸಾವಿರ ಕ್ಯೂಸೆಕ್ ಗೆ ಬಂದು ನಿಂತಿದೆ. ತುಂಬಿರುವ ಜಲಾಶಯವನ್ನು ನೋಡಲು ದಿನ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದು, ಹಂಪಿ ವೀಕ್ಷಣೆಗೆ ಬರುವ ಬಹುತೇಕ ಪ್ರವಾಸಿಗರು ಜಲಾಶಯದತ್ತ ಮುಖ ಮಾಡಿದ್ದಾರೆ. ಇನ್ನು ಜಲಾಶಯ ತುಂಬಲು 30 ಅಡಿ ಬಾಕಿ ಇದೆ.

ಅದೇ ರೀತಿ ರಾಜ್ಯದ ಕರಾವಳಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಸತತವಾಗಿ ಮಳೆ ಸುರಿಯುತ್ತಿದ್ದು, ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಮಂಗಳೂರು ನಗರದಲ್ಲಿ ತಗ್ಗು ಪ್ರದೇಶಗಳಲ್ಲಿ  ನೀರು ತುಂಬಿಕೊಂಡಿದೆ. ಉಳ್ಳಾಲದ ಅಂಬ್ಲಮೊಗರು ಬಳಿ ಗುಡ್ಡ ಕುಸಿದು ಎರಡು ಮನೆಗಳಿಗೆ ಹಾನಿಯಾಗಿದೆ. ಗುಡ್ಡ ಕುಸಿದು ರಸ್ತೆಗೆ ಬಿದ್ದಿರುವುದರಿಂದ ಸುಮಾರು 10 ಮನೆಗಳ ಸಂಪರ್ಕಕ್ಕೆ ಅಡಚಣೆಯಾಗಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 735 ಮಿಲಿ ಮೀಟರ್ ಮಳೆಯಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಅತ್ಯಧಿಕ 834 ಮಿಲಿ ಮೀಟರ್ ಮಳೆ ಸುರಿದೆ.


ಸಂಬಂಧಿತ ಟ್ಯಾಗ್ಗಳು

Tungabhadra reservoir ಹಂಪಿ ನೀರಿನ ಮಟ್ಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ