ಅಪ್ರಾಪ್ತ ಬಾಲಕಿ ಅಪಹರಿಸಿ ಲೈಂಗಿಕ ದೌರ್ಜನ್ಯ!

Minor girl kidnaped and Sexual harrasement on her!

20-06-2018

ಬೆಂಗಳೂರು: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಹೀನ ಕೃತ್ಯ ಚಿಕ್ಕಬಳ್ಳಾಪುರದ ಬೊಮ್ಮಹಳ್ಳಿಯಲ್ಲಿ ನಿನ್ನೆ ಸಂಜೆ ನೆಡೆದಿದೆ. ಬೊಮ್ಮಹಳ್ಳಿಯಲ್ಲಿ ಸಂಜೆ 7 ಗಂಟೆ ಸಮಯದಲ್ಲಿ ಆಟವಾಡುತ್ತಿದ್ದ ಮಗುವನ್ನು ಡಿ.ದ್ಯಾವಮ್ಮ, ರಾಮಕ್ಕ ಮಗುವಿನ ಬಾಯಿಮುಚ್ಚಿಕೊಂಡು ಅವರ ಮನೆಗೆ ಕರೆದುಕೊಂಡು ಹೋಗಿದ್ದಾರೆ.

ನಂತರ ಇದೇ ಗ್ರಾಮದ ನಾಲ್ಕು ಜನ ವಯಸ್ಕರಾದ ಬಿ.ಎಂ.ರಾಮಾಂಜಿನಪ್ಪ, ಬಿ.ಎಂ.ಶಿವಪ್ಪ, ಬಿ.ಎಂ.ಬಾಲಕೃಷ್ಣ ಹಾಗೂ ಶ್ರೀನಿವಾಸ್ ರಿಂದ ಅಪ್ರಾಪ್ತ ಬಾಲೆಯ ಮೇಲೆ ಲೈಂಗಿಕ ದೌರ್ಜನ್ಯ  ನಡೆಸಿದ್ದಾರೆಂದು ಬಾಲಕಿಯ ತಾಯಿ ದೂರು ನೀಡಿದ್ದಾರೆ.

ಬಾಲಕಿಯನ್ನು ರಕ್ಷಿಸಲು ಹೋದ ಮಹಿಳೆ ಮೇಲೂ ಸಹ ಅತ್ಯಾಚಾರಕ್ಕೆ ಯತ್ನಿಸಿದ್ದಾರೆಂದು ಮಗುವಿನ ತಾಯಿ ದೂರಿದ್ದಾರೆ. ಅದೇ ಗ್ರಾಮದ ಮಹಿಳೆ ತೆಡೆಯಲು ಹೋದಾಗ ಆಕೆಯ ಮೇಲೂ ಹಲ್ಲೆ ನಡೆಸಿ ಆಕೆಯ ಮೇಲೂ ನಾಲ್ವರು ಪುರುಷರು ಅತ್ಯಾಚಾಕ್ಕೆ ಯತ್ನಿಸಿದ್ದಾರೆ. ಅಸ್ವಸ್ಥಗೊಂಡ ಮಹಿಳೆ ಹಾಗೂ ಬಾಲಕಿಗೆ ಗುಡಿಬಂಡೆ ಆಸ್ಪತ್ರೆಯ ವಿಶೇಷ ಚಿಕಿತ್ಸಾ ಘಟಕದಲ್ಲಿ ಆರೈಕೆ ಮಾಡಲಾಗುತ್ತಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

minior girl Rape ಆರೈಕೆ ವಯಸ್ಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ