ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ಸಾರಿಗೆ ಸಚಿವರು ಹೇಳಿದ್ದೇನು ಗೊತ್ತಾ?

Free bus pass for students: Do you know what the Transport Minister said?

20-06-2018

ಬೆಂಗಳೂರು: ನಮ್ಮ ಮೆಟ್ರೋ ಅನ್ನು ಸಾರಿಗೆ ಇಲಾಖೆಯಡಿ ತರುವುದಕ್ಕೆ ಸಾರಿಗೆ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ‘ನಮ್ಮ ಮೆಟ್ರೋದವರು ಬಸ್ ನಿಲ್ದಾಣಕ್ಕೆ ಸೂಕ್ತ ವ್ಯವಸ್ಥೆ ಮಾಡಿಲ್ಲ. ಸಾರ್ವಜನಿಕ ಸ್ನೇಹಿ ವ್ಯವಸ್ಥೆ ನಮ್ಮ ಮೆಟ್ರೋದಿಂದ ಆಗಿಲ್ಲ. ನಮ್ಮ ಮೆಟ್ರೋ, ಸಾರಿಗೆ ಇಲಾಖೆಯಡಿ ಬಂದರೆ ಹಲವು ಸಮಸ್ಯೆಗಳು ಬಗೆಹರಿಯುತ್ತವೆ’ ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಸುಮಾರು 19.6ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗುವುದು. ಪದವಿ ಓದುತ್ತಿರುವ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ಕುರಿತು ಶೀಘ್ರದಲ್ಲಿ ಮುಖ್ಯಮಂತ್ರಿಗಳೇ ಈ ಘೋಷಣೆ ಮಾಡುತ್ತಾರೆ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ನೀಡುವ ಉಚಿತ ಬಸ್ ಪಾಸ್ ನಿಂದ ಅಂದಾಜು 620ಕೋಟಿ ರೂ. ಗಳಷ್ಟು ಹೊರೆಯಾಗಲಿದೆ. ಇದರಲ್ಲಿ ಶೇ.25ರಷ್ಟನ್ನು ಸಾರಿಗೆ ಇಲಾಖೆ ಭರಿಸುತ್ತದೆ. ಉಳಿದ ಹಣವನ್ನು ಶಿಕ್ಷಣ ಇಲಾಖೆ‌ ಅಥವಾ ಸರ್ಕಾರ ನೀಡಿದರೆ ಬಸ್ ಪಾಸ್ ವಿತರಿಸಲು ನಾವು ಸಿದ್ಧ ಎಂದರು.


ಸಂಬಂಧಿತ ಟ್ಯಾಗ್ಗಳು

D.C.thammanna Free bus pass Metro ಸಮಸ್ಯೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ