ಡಿಕೆಶಿ ಜೊತೆ ನಾವಿದ್ದೇವೆ: ಸಿಎಂ ಕುಮಾರಸ್ವಾಮಿ

We are with D.K.Shiva kumar: CM Kumaraswamy

20-06-2018

ಬೆಂಗಳೂರು: ಆದಾಯ ತೆರಿಗೆ ಇಲಾಖೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನಾತ್ಮಕವಾಗಿ ಸಚಿವ ಡಿ.ಕೆ.ಶಿವಕುಮಾರ್ ಜೊತೆಗೆ ನಾವಿದ್ದೇವೆ. ಅವರೂ ಕೂಡ ಕಾನೂನಾತ್ಮಕವಾಗಿ ಹೋರಾಟ ನಡೆಸುತ್ತಿದ್ದಾರೆ. ಇದನ್ನು ದೊಡ್ಡ ಸುದ್ದಿ ಮಾಡುವ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಗೃಹ ಕಚೇರಿ ಕೃಷ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಡಿಕೆಶಿಯವರು ರಾಜೀನಾಮೆ ಯಾಕೆ ಕೊಡಬೇಕು, ರಾಜೀನಾಮೆ ಕೊಡುವಂತದ್ದೇನೂ ಆಗಿಲ್ಲ. ಬಿಜೆಪಿಯವರು ಎಷ್ಟು ಬಾರಿ ರಾಜೀನಾಮೆ ನೀಡಿದ್ದಾರೆ. ಅದರ ಬಗ್ಗೆ ಮುಂದೆ ಮಾತನಾಡ್ತೀನಿ ಎಂದರು.

ಜಮೀರ್ ಅಹಮದ್ ಮೆಕ್ಕಾ ಹೋಗಿ ಬಂದಿದ್ದಾರೆ. ಮೆಕ್ಕಾದಿಂದ ತಂದಿದ್ದ ಖರ್ಜೂರ ಮತ್ತು ಹೋಲಿ ನೀರು ಕೊಡಲು ಬಂದಿದ್ದರು ಅಷ್ಟೇ. ಇದನ್ನೂ ದೊಡ್ಡ ಸುದ್ದಿ ಮಾಡಬೇಕಾ? ಮೆಕ್ಕಾಗೆ ಹೋಗಿದ್ದರು ತಂದು ಕೊಟ್ಟಿದ್ದಾರೆ ಎಂದರು. ಪರಿಷತ್ ಸದಸ್ಯ ಫಾರುಕ್ ಸಹ ತಂದು ಕೊಟ್ಟಿದ್ದರು, ಅದರಲ್ಲೇನೂ ವಿಶೇಷ ಇಲ್ಲ ಎಂದು ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

D.K.Shivakumar H.D.Kumaraswamy ಪರಿಷತ್ ರಾಜೀನಾಮೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ