ನಾಪತ್ತೆಯಾಗಿದ್ದ ಸುಖೋಯ್-30 ಯುದ್ಧ ವಿಮಾನ ಪತ್ತೆ !

Kannada News

26-05-2017

ನವದೆಹಲಿ :- ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಭಾರತೀಯ ವಾಯ ಪಡೆಯ ಸುಖೋಯ್-30 ಯುದ್ಧ ವಿಮಾನದ ಆವಶೇಷಗಳು ಭಾರತ-ಚೀನಾ ಗಡಿಯಲ್ಲಿ ಪತ್ತೆಯಾಗಿದೆ. ಆದರೆ ಇಬ್ಬರೂ  ಪೈಲೆಟ್‍ಗಳು ಬದುಕುಳಿದಿರುವ ಯಾವುದೇ ಸುಳಿವು ಲಭ್ಯವಾಗದಿರುವುದು ಆತಂಕಕ್ಕೆ ಕಾರಣವಾಗಿದೆ. ಅಸ್ಸಾಂನ ತೇಜ್‍ಪುರ್‍ನಿಂದ 60 ಕಿ.ಮೀ. ದೂರದಲ್ಲಿರುವ ಗೊಂಡಾರಣ್ಯದಲ್ಲಿ ಫೈಟರ್ ಜೆಟ್ ಅವಶೇಷಗಳು ಪತ್ತೆಯಾಗಿವೆ. ಮೇ  23 ರ ಮಂಗಳವಾರ ಮೇಲೆ ಹಾರಿದ್ದ ಸುಖೋಯ್ ವಿಮಾನ ಬೆಳಗ್ಗೆ 11.30ರ ಸಮಯದಲ್ಲಿ  ಅರುಣಾಚಲ ಪ್ರದೇಶದ ದೌಲಾಸಂಗ್ ಬಳಿ ರೆಡಾರ್‍ನಿಂದ ನಾಪತ್ತೆಯಾಗಿತ್ತು. ಇದರಲ್ಲಿದ್ದ ಪೈಲೆಟ್‍ಗಳಿಬ್ಬರು ಬದುಕುಳಿದಿರುವ ಸಾಧ್ಯತೆ ತೀರಾ ಕಡಿಮೆ ಎಂದು ಮೂಲಗಳು ತಿಳಿಸಿವೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ