ಬೈಕ್ ಗೆ ಅಡ್ಡ ಬಂದ ಮಕ್ಕಳನ್ನು ತಪ್ಪಿಸಲು ಹೋಗಿ ಇಬ್ಬರ ಸಾವು

Two deaths were reportedL while avoid children crossing the bike

20-06-2018

ಬೆಂಗಳೂರು: ಆರ್.ಟಿ.ನಗರದ ಆನಂದ್ ನಗರ ಕ್ರಾಸ್‍ ನಲ್ಲಿ ನಿನ್ನೆ ರಾತ್ರಿ ಬೈಕ್‍ ನಲ್ಲಿ ವೇಗವಾಗಿ ಹೋಗುತ್ತಿದ್ದ ಇಬ್ಬರು ಯುವಕರು ಅಡ್ಡಬಂದ ಮಕ್ಕಳನ್ನು ತಪ್ಪಿಸಲು ಹೋಗಿ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಕೆಂಪಾಪುರದ ಗೌತಮ್ (21) ಹಾಗೂ ಅರಮನೆ ಗುಟ್ಟಹಳ್ಳಿಯ ಸುಹಾಸ್ (22) ಎಂದು ಗುರುತಿಸಲಾಗಿದೆ. ಪಿಯುಸಿ ನಂತರ ಉದ್ಯೋಗದ ಹುಡುಕಾಟದಲ್ಲಿದ್ದ ಗೌತಮ್, ಸಾಫ್ಟ್‍ ವೇರ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಸುಹಾಸ್ ಜೊತೆ ರಾತ್ರಿ 11.50ರ ವೇಳೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆ ಯಮಹಾ ಬೈಕ್‍ನಲ್ಲಿ ಹೋಗುತ್ತಿದ್ದರು.

ಮಾರ್ಗಮಧ್ಯೆ ಆನಂದ್ ನಗರ ಕ್ರಾಸ್ ಬಳಿ ಮಕ್ಕಳು ಅಡ್ಡಬಂದಾಗ ಅವರನ್ನು ತಪ್ಪಿಸಲು ಹೋಗಿ ಆಯತಪ್ಪಿ ಬಿದ್ದು ಗೌತಮ್ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡ ಸುಹಾಸ್ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಧ್ಯರಾತ್ರಿ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿರುವ ಆರ್.ಟಿ.ನಗರ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಸಾರಾಫಾತಿಮಾ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Baptist Hospital Bike ride ಅಂತರರಾಷ್ಟ್ರೀಯ ಯುವಕರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ