ಮೋದಿಯವರ ಫಿಟ್ನೆಸ್ ಸವಾಲನ್ನು ಸ್ವೀಕರಿಸಿದ ಐಪಿಎಸ್ ಅಧಿಕಾರಿ

An IPS officer accepted Modi fitness challenge

20-06-2018

ಬೆಂಗಳೂರು: ಪ್ರಧಾನಿ ಮೋದಿ ಅವರ ಫಿಟ್ನೆಸ್ ಸವಾಲನ್ನು ಮಾಜಿ ಪ್ರಧಾನಿ ದೇವೇಗೌಡ ಅವರು ಸ್ವೀಕರಿಸಿ ಗಮನ ಸೆಳೆದ ಬೆನ್ನಲ್ಲೇ ಹಿರಿಯ ಐಪಿಎಸ್ ಅಧಿಕಾರಿ ಕಿಶೋರ್ ಚಂದ್ರ ಕೂಡ ಸವಾಲು ಸ್ವೀಕರಿಸಿರುವುದು ಸಾಮಾಜಿಕ ಜಾಲತಣಗಳಲ್ಲಿ ವೈರಲ್ ಆಗಿದೆ.

ದೇವೇಗೌಡರ ಫಿಟ್ನೆಸ್ ಸವಾಲಿನ ವೀಡಿಯೋ ವೈರಲ್ ಆದ ಬೆನ್ನಲ್ಲೇ ಹಿರಿಯ ಐಪಿಎಸ್ ಅಧಿಕಾರಿ ರಾಜ್ಯ ಪೊಲೀಸ್ ಗೃಹ ಮಂಡಳಿ ಪೊಲೀಸ್ ಮಹಾನಿರ್ದೇಶ(ಡಿಜಿ)ಕಿಶೋರ್ ಚಂದ್ರ ಅವರು ಯೋಗ, ವ್ಯಾಯಾಮ ಮಾಡುತ್ತಿರುವ ವೀಡಿಯೋ ನೋಡಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..

ಐಪಿಎಸ್ ಅಧಿಕಾರಿ ಕಿಶೋರ್ ಚಂದ್ರ ಅವರ ನಾಲ್ಕು ನಿಮಿಷದ ವ್ಯಾಯಾಮ ವೀಡಿಯೋವನ್ನು ಎಡಿಜಿಪಿ ಪ್ರತಾಪ್ ರೆಡ್ಡಿ ತಮ್ಮ ಟ್ಟೀಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ಆ ವೀಡಿಯೋ ಇದೀಗ ವೈರಲ್ ಆಗಿದೆ. 59 ವರ್ಷದ ಕಿಶೋರ್ ಚಂದ್ರ ಅವರ ಈ ವೀಡಿಯೋ ಮೋದಿ ಚಾಲೆಂಜ್‍ಗೆ ಉತ್ತರ ನೀಡುವಂತಿದೆ.


ಸಂಬಂಧಿತ ಟ್ಯಾಗ್ಗಳು

IPS Kishore chanadra ವ್ಯಾಯಾಮ ದೇವೇಗೌಡ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ