ಸಾವಿನಲ್ಲೂ ಒಂದಾದ ಅಣ್ಣ-ತಮ್ಮ

younger Brother-Brother died the same day at devanahalli

20-06-2018

ಬೆಂಗಳೂರು: ಅಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ತಮ್ಮ ಸಾವನ್ನಪ್ಪಿದ ಸುದ್ದಿ ಕೇಳಿ ಅಘಾತಗೊಂಡ ಅಣ್ಣ ಕೂಡ ಹೃದಯಾಘಾತದಿಂದ ಮೃತಪಟ್ಟು ಸಾವಿನಲ್ಲೂ ಇಬ್ಬರೂ ಒಂದಾಗಿರುವ ಮನಕಲುಕುವ ಘಟನೆ ದೇವನಹಳ್ಳಿಯ ವಿಜಯಪುರದಲ್ಲಿನಡೆದಿದೆ.

ವಿಜಯಪುರ ನಿವಾಸಿಗಳಾದ ಮುನೀಂದ್ರ (30) ಮತ್ತು ಈತನ ಅಣ್ಣ ಕೃಷ್ಣಪ್ಪ (45) ಮೃತಪಟ್ಟವರನ್ನು ಗುರುತಿಸಲಾಗಿದೆ. ಕಳೆದ ಹಲವು ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತಮ್ಮ ಮುನೀಂದ್ರ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.

ತಮ್ಮನ ಸಾವಿನ ಸುದ್ದಿ ಕೇಳಿ ಅಘಾತಗೊಂಡ ಅಣ್ಣ ಕೃಷ್ಣಪ್ಪ ಸ್ಥಳದಲ್ಲೇ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ‘ಡಿ’ ಗ್ರೂಪ್ ನೌಕರನಾಗಿ ಕೃಷ್ಣಪ್ಪ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಸಹೋದರರಿಬ್ಬರ ಸಾವಿನಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.


ಸಂಬಂಧಿತ ಟ್ಯಾಗ್ಗಳು

Brother Death ‘ಡಿ’ ಗ್ರೂಪ್ ಅಘಾತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ