ನನಗೆ ಕಿರುಕುಳ ನೀಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್20-06-2018

ಬೆಂಗಳೂರು: ‘ನನ್ನನ್ನೇ ಯಾಕೆ ಟಾರ್ಗೆಟ್ ಮಾಡುತ್ತಿದ್ದಾರೆ? ಯಾಕೆ ಬೇರೆಯವರ ಮನೆಯಲ್ಲಿ ಡೈರಿ, ಲೆಕ್ಕ ಇಟ್ಟಿದ್ದು ಗೊತ್ತಿಲ್ಲವೇ? ಅಂತಹವರ ಮೇಲೆ ಯಾಕೆ ದಾಳಿ ಮಾಡಲ್ಲ’ ಎಂದು ಸಚಿವ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಈಗ ವಿಚಾರಣೆಗೆ ಹಾಜರಾಗಿ ಎಂಬ ನೋಟಿಸ್ ಬಂದಿದೆ. ಆದರೆ, ಯಾವುದೇ ಸಮನ್ಸ್ ಬಂದಿಲ್ಲ. ನಿಮಗೆ ಏನು ಅನ್ನಿಸುತ್ತೆ ಅದನ್ನ ನೀವು ಮಾಡಿ. ಅವರಿಗೆ ಏನು ಅನ್ನಿಸುತ್ತೆ ಅವರು ಮಾಡುತ್ತಾರೆ. ಕೊನೆಗೆ, ದೇಶ, ಕಾನೂನು ಎಲ್ಲವೂ ಇದೆ. ಕಾನೂನು ಮೂಲಕ ಹೋರಾಟ ಮಾಡೋದು ಗೊತ್ತಿದೆ ಎಂದರು. 

‘ನಮ್ಮ ಬಳಿಯೂ ಕೆಲವರ ಡೈರಿಗಳಿವೆ. ಯಾರ್ಯಾರಿಗೆ ಏನೇನು ಬರೆದಿದೆ ಅನ್ನೋದು ಗೊತ್ತಿದೆ. ಕೊನೆಯಲ್ಲಿ ಏನೂ ಆಗಲ್ಲವೆಂದಾಗ ಅದನ್ನ ಬಹಿರಂಗ ಮಾಡುತ್ತೇನೆ' ಎಂದು ಶಿವಕುಮಾರ್ ಎಚ್ಚರಿಸಿದ್ದಾರೆ.

'ನನ್ನನ್ನ ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಡಿಕೆಶಿ ಯಾವುದಕ್ಕೂ ಹೆದರುವುದಿಲ್ಲ. ನಾನು ಕಾನೂನಿಗೆ ಬೆಲೆ ಕೊಡುವವನು. ಕೋರ್ಟ್ನಲ್ಲಿರುವುದರಿಂದ ಈಗ ಏನು ಹೇಳೋದಿಲ್ಲ. ಇಲ್ಲವಾಗಿದ್ದರೆ ನಾನೇನು ಅನ್ನೋದನ್ನ ತೋರಿಸುತ್ತಿದ್ದೆ' ಎಂದು ಹೇಳಿದ್ದಾರೆ.

'ಈಗ ಒಂದು ಐಟಿ ಕೇಸ್ ಫಿಟ್ ಮಾಡಿದ್ದಾರೆ. ಆದರೆ, ಸಮನ್ಸ್ ಇನ್ನೂ ಯಾವುದು ಬಂದಿಲ್ಲ. ಯಾರೋ ಏನೋ ಸ್ಟೇಟ್ ಮೆಂಟ್ ಕೊಟ್ರು ಅಂತ ನನ್ನನ್ನ ಸಿಕ್ಕಿಸೋಕೆ ಆಗಲ್ಲ. ಇದೆಲ್ಲಾ ಯಾಕೆ ಮಾಡ್ತಿದ್ದಾರೆ ಅನ್ನೋದು ಗೊತ್ತಿದೆ ಎಂದು ಡಿಕೆಶಿ ಬಾಂಬ್ ಹಾಕಿದ್ದಾರೆ. ನನಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದಾರೆ. ನನ್ನ ಸಂಬಂಧಿಕರು, ಆಪ್ತರಿಗೂ ಕಿರುಕುಳ ಕೊಡುತ್ತಿದ್ದಾರೆ. ಇದೆಲ್ಲವೂ ಯಾಕೆ ಮಾಡುತ್ತಿದ್ದಾರೆ ಅಂತ ಗೊತ್ತಿದೆ. ನಾನು ಈಗ ಮಾತನಾಡಲ್ಲ, ಸಮಯ ಬಂದಾಗ ಮಾತನಾಡುತ್ತೇನೆ' ಎಂದು ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

D.K.Shivakumar Target ವಿಚಾರಣೆಗೆ ಸಮನ್ಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ