ಸುದರ್ಶನ್‌ ಬಲ್ಲಾಳ್‌ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ

Lifetime Achievement award to Dr.Sudarshan Ballal

20-06-2018

ಬೆಂಗಳೂರು: ಉಚಿತ ಆರೋಗ್ಯ ಸೇವೆಗಳ ಮೂಲಕ ಸಮಾಜಮುಖಿ ಕೆಲಸ ಮಾಡಿರುವ ಮಣಿಪಾಲ್‌ ಆಸ್ಪತ್ರೆ ಅಧ್ಯಕ್ಷ ಡಾ||ಸುದರ್ಶನ್‌ ಬಲ್ಲಾಳ್ ಅವರಿಗೆ ಪ್ರಸಕ್ತ ಸಾಲಿನ 'ಬೆಂಗಳೂರು ಆರೋಗ್ಯ ಉತ್ಸವದಲ್ಲಿ' ‘ಜೀವಮಾನ ಸಾಧನೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೂನ್ 14ರಿಂದ 17ರ ವರೆಗೆ ಬೆಂಗಳೂರು ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆದ ‘ಬೆಂಗಳೂರು ಆರೋಗ್ಯ ಉತ್ಸವ’ದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಡಾ||ಸುದರ್ಶನ್ ಬಲ್ಲಾಳ್‌ ಅವರು ‘ಬೇರೆ ಬೇರೆ ಮೇಳಗಳ ಹೆಸರುಗಳನ್ನು ಕೇಳಿದ್ದೇನೆ. ಆದರೆ ಆರೋಗ್ಯಕ್ಕೂ ಒಂದು ಮೇಳ ಮಾಡಬೇಕು ಎಂಬುದು ಖ್ಯಾತ ಮಾಧ್ಯಮ ತಜ್ಞರಾದ ದೀಪಕ್‌ ತಿಮ್ಮಯ ಅವರ ಆಲೋಚನೆಯಾಗಿದೆ. ಅದೇ ರೀತಿಯಲ್ಲಿ ಎರಡನೇ ಬಾರಿಗೆ ‘ಬೆಂಗಳೂರು ಆರೋಗ್ಯ ಉತ್ಸವ’ವನ್ನು ನಡೆಸಿದ್ದಾರೆ. ಇಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಉಪಯುಕ್ತವಾದ ಚಟುವಟಿಕೆಗಳು ನಡೆದಿವೆ ಎಂದರು.

ಇದೇ ವೇಳೆ ಡಾ.ರಾಮಚಂದ್ರ, ಡಾ.ಸೀತಾರಾಮ್‌ ಭಟ್, ಡಾ.ಶರತ್‌ ಕುಮಾರ್‌, ಡಾ.ವಿಶಾಲ್‌ ರಾವ್‌, ಡಾ.ಚಂದ್ರಶೇಖರ್‌ ಚಿಕ್ಕಮುನಿಯಪ್ಪ, ಡಾ.ಹೇಮಾ ದಿವಾಕರ್‌ ಅವರಿಗೂ ‘ಅತ್ಯುತ್ತಮ ಸಾಧಕರು’ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.


ಸಂಬಂಧಿತ ಟ್ಯಾಗ್ಗಳು

D.K.Shivakumar Sudarshan Ballal ಉಪಯುಕ್ತ ಸಮಾಜಮುಖಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ