ಬಿನ್ನಿಪೇಟೆ ವಾರ್ಡ್ ಉಪಚುನಾವಣೆ: ಜೆಡಿಎಸ್ ನ ಐಶ್ವರ್ಯ ಗೆಲುವು

Binnypet Ward by-election: JDS candidate aishwarya won

20-06-2018

ಬೆಂಗಳೂರು: ಬಿನ್ನಿಪೇಟೆ ಪ್ರದೇಶದ ಬಿಬಿಎಂಪಿ ವಾರ್ಡ್‌–121ರ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಐಶ್ವರ್ಯ ಗೆಲುವು ಸಾಧಿಸಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನ ಗೆಲುವು ಖುಷಿ ತಂದಿದೆ. ಈ ಗೆಲುವನ್ನು ಜೆಡಿಎಸ್ ವರಿಷ್ಠ ದೇವೇಗೌಡ, ಸಿಎಂ ಕುಮಾರಸ್ವಾಮಿ ಮತ್ತು ಕ್ಷೇತ್ರದ ಜನತೆಗೆ ಅರ್ಪಿಸುತ್ತೇನೆ’ ಎಂದರು. ‘ನನ್ನ ತಂದೆ-ತಾಯಿ ಅವರ ಸೇವೆಯನ್ನು ಜನ ಗುರುತಿಸಿದ್ದಾರೆ. ನಮ್ಮ ತಾಯಿ ಈ ಗೆಲುವಿನ ಮೂಲಕ ಜೀವಂತವಾಗಿದ್ದಾರೆ’, ಎಂದು ತಮ್ಮ ತಾಯಿ ಮಹದೇವಮ್ಮ ಅವರನ್ನು ನೆನೆದು ಭಾವುಕರಾದರು.

‘ಜನ ಕೆಲಸಕ್ಕೆ ಮನ್ನಣೆ ನೀಡುತ್ತಾರೆ ಹಣಕ್ಕೆ ಅಲ್ಲ’ ಎಂಬ ಸಂದೇಶ ಮತದಾರರು ನೀಡಿದ್ದಾರೆ ಎಂದರು. ಐಶ್ವರ್ಯಾ ಪರ ಒಟ್ಟು 7188 ಮತಗಳು ಚಲಾವಣೆಯಾಗಿದ್ದವು. ಈ ವಾರ್ಡ್ ನಲ್ಲಿ ಒಟ್ಟು 34,582 ಮತದಾರರಿದ್ದು, 17,746 ಪುರುಷ ಮತ್ತು 16826 ಮಹಿಳಾ ಮತದಾರರಿದ್ದಾರೆ. ಬಿಜೆಪಿಯಿಂದ ಚಾಮುಂಡೇಶ್ವರಿ ಜಿ, ಕಾಂಗ್ರೆಸ್ ನಿಂದ ವಿದ್ಯಾ ಶಂಕರ್ ಸ್ಪರ್ಧಿಸಿದ್ದರು.

 


ಸಂಬಂಧಿತ ಟ್ಯಾಗ್ಗಳು

binnypet By election ಬಿಬಿಎಂಪಿ ಸೇವೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ