ಸ್ವಗ್ರಾಮದಲ್ಲಿ ಪ್ರಾಣಬಿಟ್ಟ ಯೋಧ

cardiac attack: an Soldier died at Mysore

20-06-2018

ಮೈಸೂರು: ಹೃದಯಾಘಾತದಿಂದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧರೊಬ್ಬರು ಸಾವನ್ನಪ್ಪಿದ್ದಾರೆ. ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಜಿಲ್ಲೆಯ ಕೆ.ಆರ್.ನಗರದ ಮಾವತ್ತೂರು ಮಹೇಶ್ (38) ಮೃತ ಯೋಧರು. ಜಮ್ಮು-ಕಾಶ್ಮೀರದ ಭಾರತೀಯ ಭೂಸೇನಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಮಹೇಶ್. ಕಳೆದ ವಾರವಷ್ಟೆ ರಜೆ ಮೇಲೆ ಸ್ವಗ್ರಾಮವಾದ ಮಾವತ್ತೂರಿಗೆ ಬಂದಿದ್ದರು. ಆದರೆ, ಸೋಮವಾರ ಸಂಜೆ ಸ್ವಗ್ರಾಮದಲ್ಲಿ ತೀವ್ರ ಹೃದಯಾಘಾತವಾಗಿತ್ತು. ತಕ್ಷಣ ಅವರನ್ನು ಮೈಸೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ನಾಳೆ ಮಾವತ್ತೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಾವತ್ತೂರು ಮಹೇಶ್ ಅವರ ಅತ್ಯಸಂಸ್ಕಾರ ನೆರವೇರಲಿದೆ.


ಸಂಬಂಧಿತ ಟ್ಯಾಗ್ಗಳು

cardiac attack army ಅತ್ಯಸಂಸ್ಕಾರ ಸೇನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ತುಂಬಾ ಚೆನ್ನಾಗಿದೆ
  • ಅಮೃತಾ
  • ವ್ಯವಸಾಯ