ಉಡುಪಿಯಲ್ಲಿ ಮುಂದುವರೆದ ಭಯಂಕರ ಮಳೆ

Heavy Rain at udupi,karkala Baindur

20-06-2018

ಉಡುಪಿ: ಸತತ 24 ಗಂಟೆಗಳ ಕಾಲ ಉಡುಪಿಯಲ್ಲಿ ನಿರಂತರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನೀಡಿದ್ದ ಮುನ್ಸೂಚನೆ ನಡುವೆ, 24 ಗಂಟೆಗಳು ಕಳೆದರೂ ಇನ್ನು ಮಳೆ ಮುಂದುವರೆದಿದೆ. ಉಡುಪಿ ನಗರ ಸೇರಿದಂತೆ ಕಾರ್ಕಳ, ಬೈಂದೂರು, ಕಾಪು ಕೊಲ್ಲೂರು ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ನಿನ್ನೆ ರಾತ್ರಿಯಿಂದ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ಮಳೆಯಿಂದ ಪಶ್ಚಿಮ ಘಟ್ಟದ ನದಿಗಳು, ಜಲಪಾತಗಳು ಮೈದುಂಬಿ ಹರಿಯುತ್ತಿವೆ. ಈ ಬಾರಿಯ ಮುಂಗಾರು ಮಳೆಗೆ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಗದ್ದೆಗಳಲ್ಲಿ ಭತ್ತದ ಬೀಜಬಿತ್ತಿ ಮುಂಗಾರು ಮಳೆಗೆ ಧನ್ಯವಾದ ಹೇಳುತ್ತಿದ್ದಾರೆ ರೈತರು.


ಸಂಬಂಧಿತ ಟ್ಯಾಗ್ಗಳು

westren ghat Monsoon ಕಾರ್ಕಳ ಹವಾಮಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ