ಬಜೆಟ್ ಮಂಡನೆ ಗೊಂದಲ ಇಲ್ಲ: ಹೆಚ್.ಡಿ.‌ರೇವಣ್ಣ

H.D.Revanna met siddaramaiah at Ujire

19-06-2018

ಮಂಗಳೂರು: ರಾಜ್ಯ ಬಜೆಟ್ ಮಂಡನೆ ಕುರಿತಾಗಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಯಾವುದೇ ಗೊಂದಲ ಇಲ್ಲ. ಸಿಎಂ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಲಿದ್ದಾರೆ ಎಂದು ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ಚಾರ್ಮಾಡಿಯಿಂದ ಬರುವಾಗ ಸಿದ್ದರಾಮಯ್ಯನವರ ಆರೋಗ್ಯ ವಿಚಾರಣೆ ಮಾಡಿ ಮಾತನಾಡಿ ಬಂದಿದ್ದೀನಿ. ಬೇರಾವ ರಾಜಕೀಯ ಚರ್ಚೆ ನಡೆದಿಲ್ಲ. ದೆಹಲಿಗೆ ಹೋದಾಗ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದೆ. ಇದಕ್ಕೆ ಯಾವುದೇ ಬಣ್ಣ ಕಟ್ಟುವ ಅವಶ್ಯಕತೆ ಇಲ್ಲ ಎಂದು ರೇವಣ್ಣ ಸ್ಪಷ್ಟಪಡಿಸಿದರು. ಸರ್ಕಾರದ ಕುರಿತಾಗಿ ಸಿದ್ದರಾಮಯ್ಯಗೆ ಯಾವುದೇ ಅಸಮಾಧಾನ ಇಲ್ಲ. 'ಒಳ್ಳೆಯ ಕೆಲಸ ಮಾಡ್ಕೊಂಡು ಹೋಗಿ ನಮ್ದೇನಿಲ್ಲ' ಅಂದಿದ್ದಾರೆ ಎಂದು ಹೇಳಿದರು.

ಶಿರಾಡಿ ಘಾಟ್ ಕಾಮಗಾರಿ‌ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ, ಮಳೆಯಿಂದ ಕಾಮಗಾರಿ‌ ಸ್ವಲ್ಪ ಕುಂಠಿತ ಆಗಿದೆ. ಚಾರ್ಮಾಡಿ ಘಾಟ್ ರಸ್ತೆ ಪರಿಶೀಲನೆ ಮಾಡಿದ್ದೇನೆ. ಜುಲೈ ಮೊದಲ ವಾರದಲ್ಲಿ ಶಿರಾಡಿ ಘಾಟ್ ಸಂಚಾರ ಮುಕ್ತವಾಗಲಿದೆ. ಘಾಟ್ ರಸ್ತೆ ಸಂಪೂರ್ಣ ದುರಸ್ತಿಗೆ 250 ಕೋಟಿ ಶಾಶ್ವತ ಕಾಮಗಾರಿ ಅಗತ್ಯ ಇದಕ್ಕಾಗಿ ಅನುದಾನಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ರೇವಣ್ಣ ತಿಳಿಸಿದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ