‘ಜನಸಾಮಾನ್ಯರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಬಾಗಿಲು ಬಂದ್ ಆಗಿವೆ’19-06-2018

ಬೆಂಗಳೂರು: ರಾಜಕಾರಣ ಸೇರಿದಂತೆ ಹಲವಾರು ಮಹತ್ವದ ಕ್ಷೇತ್ರಗಳಲ್ಲಿ ವಂಶ ಪಾರಂಪರ್ಯ ಧೋರಣೆಗಳು ಉಂಟಾಗುತ್ತಿದ್ದು, ಇದರಿಂದ ಜನಸಾಮಾನ್ಯರಿಗೆ ಅವಕಾಶದ ಬಾಗಿಲು ಮುಚ್ಚಿದಂತಾಗುತ್ತದೆ ಎಂದು ಸಂಸದ ವರುಣ್ ಗಾಂಧಿ ಆತಂಕ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘ ಆಯೋಜಿಸಿದ್ದ “ಭಾರತದ ಭವಿಷ್ಯದ ಹಾದಿ ಅವಕಾಶಗಳು ಮತ್ತು ಸವಾಲುಗಳು” ವಿಷಯ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜಕೀಯ, ವಂಶ ಪಾರಂಪರಿಕ ಧೋರಣೆಗಳನ್ನು ಅನುಸರಿಸುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ, ಪ್ರತಿ ರಾಜ್ಯ, ಜಿಲ್ಲೆ ಮತ್ತು ದೇಶದಲ್ಲಿ ಕೆಲ ಕುಟುಂಬಗಳು ತುಂಬಾ ಪ್ರಾಮುಖ್ಯತೆ ಪಡೆದುಕೊಂಡಿವೆ, ಇದು ದುರದೃಷ್ಟಕರ-ಆದರೆ ಸತ್ಯ. ಹೀಗಿರುವಾಗ ಹೆಚ್ಚಿನ ಜನ ರಾಜಕಾರಣ ಪ್ರವೇಶಿಸಲು ಬಾಗಿಲುಗಳನ್ನು ಮುಕ್ತವಾಗಿರಿಸುವುದು ಹೇಗೆ ಎಂದು ಪ್ರಶ್ನಿಸಿದರು.

ಚಲನಚಿತ್ರರಂಗ, ಕ್ರೀಡಾ ಸಮುದಾಯ, ರಾಜಕಾರಣ, ಉದ್ಯಮ, ಹೀಗೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಜನಸಾಮಾನ್ಯರಿಗೆ ಬಾಗಿಲುಗಳು ಬಂದ್ ಆಗಿವೆ ಎಂದು ಅವರು ವಿಷಾದಿಸಿದರು. ಶೈಕ್ಷಣಿಕ ರಂಗದಲ್ಲಿ ಸುಧಾರಣೆ ತರುವ ಅಗತ್ಯವಿದ್ದು, ಪಿಎಚ್‍ಡಿ ಸಂಶೋಧನೆಯನ್ನು ಉದ್ಯಮ ಹಾಗೂ ನಾವಿನ್ಯತೆಯೊಂದಿಗೆ ಸಂಪರ್ಕಿಸಬೇಕಾಗಿದೆ, ಶಿಕ್ಷಣ ಎಲ್ಲರಿಗೂ ಲಭ್ಯವಾಗುವಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಸಂಸದ ವರುಣ್ ಗಾಂಧಿ ಅಭಿಪ್ರಾಯಪಟ್ಟರು.

.


ಸಂಬಂಧಿತ ಟ್ಯಾಗ್ಗಳು

varun gandhi Public ಸಂಸದ ರಾಜಕಾರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ