ಒಬ್ಬನನ್ನು 6 ಮಂದಿ ಸೇರಿ ಕೊಲೆ: ಆರೋಪಿಗಳ ಬಂಧನ

6 friends killed one of their friend!

19-06-2018

ಬೆಂಗಳೂರು: ಕ್ರಿಕೆಟ್ ಬಾಲನ್ನು ತಂದು ಕೊಡಲಿಲ್ಲ ಎಂಬ ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆ ಮಾರಾಮಾರಿಗೆ ತಿರುಗಿ ಸ್ನೇಹಿತನೊಬ್ಬನನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದ 6 ಮಂದಿಯನ್ನು  ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಾಲಕ್ಷ್ಮಿ ಲೇಔಟ್‍ನ ಶಿವಾಜಿ (30), ಭಾಸ್ಕರ್ (30) ಪುನೀತ್ (25), ವಿನೋದ್ (23), ಭರತ್(22), ಚೇತನ್ (25) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರು ಕಳೆದ ಭಾನುವಾರ ಶಿವಾಜಿ ಮೈದಾನದಲ್ಲಿ ಕ್ರಿಕೆಟ್ ಆಟವಾಡುತ್ತಿದ್ದ ಸಂದರ್ಭದಲ್ಲಿ ಬಾಲನ್ನು ತಂದು ಕೊಡಲಿಲ್ಲ ಎನ್ನುವ ಕಾರಣಕ್ಕೆ ಪೇಂಟರ್ ಕೆಲಸ ಮಾಡುತ್ತಿದ್ದ ಸ್ನೇಹಿತ ಮಣಿಕಂಠನನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು.

ಪ್ರಕರಣ ದಾಖಲಿಸಿ ಕಾರ್ಯಚರಣೆ ನಡೆಸಿದ ಮಹಾಲಕ್ಷ್ಮೀ ಠಾಣಾ ಪೊಲೀಸರು ಮೃತ ಮಣಿಕಂಠನ ಸ್ನೇಹಿತರಾದ ಶಿವಾಜಿ, ಪುನೀತ್, ವಿನೋದ್‍ನನ್ನು ಮೊದಲಿಗೆ ಬಂಧಿಸಿ ನಿನ್ನೆ ಉಳಿದವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೃತ ಮಣಿಕಂಠ ಹಾಗೂ ಆರು ಆರೋಪಿಗಳು ಒಂದೇ ಕ್ರಿಕೆಟ್ ತಂಡದ ಸದಸ್ಯರಾಗಿದ್ದರು. ಕ್ರಿಕೆಟ್ ಆಟ ಆಡುತ್ತಿರುವಾಗ ಬಾಲ್ ಮೈದಾನದಿಂದ ಹೊರಗೆ ಹೋಗಿದೆ. ಈ ವೇಳೆ ಶಿವಾಜಿ ಎಂಬಾತನು ಮಣಿಕಂಠನಿಗೆ ಬಾಲ್ ತರುವಂತೆ ಹೇಳಿದ್ದಾನೆ. ಮೃತನು ಬಾಲಅನ್ನು ತಂದು ಕೊಡದಿದ್ದಕ್ಕೆ ತಂಡದ ಸದಸ್ಯರ ಜೊತೆ ಜಗಳ ಏರ್ಪಟ್ಟಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಸ್ಥಳದಲ್ಲೇ ಮಣಿಕಂಠನನ್ನು ಆರೋಪಿಗಳು ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು ಎಂದು ಡಿಸಿಪಿ ರಾಮ್‍ನಿವಾಸ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Murder cricket ಕ್ಷುಲ್ಲಕ ಕಾರ್ಯಚರಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ