ಒಂದೇ ಶಾಲೆಯ 6 ಮಂದಿ ಬಾಲಕರು ನಾಪತ್ತೆ

Bengaluru: 6 children missing in a school

19-06-2018

ಬೆಂಗಳೂರು: ಕಾಮಾಕ್ಷಿಪಾಳ್ಯದ ಒಂದೇ ಶಾಲೆಯ 9ನೇ ತರಗತಿಯಲ್ಲಿ ಓದುತ್ತಿದ್ದ 6 ಮಂದಿ ಬಾಲಕರು ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಕಾಮಾಕ್ಷಿಪಾಳ್ಯದ ಸೆಂಟ್ ಲಾರೆನ್ಸ್ ಶಾಲೆಯ 9ನೇ ತರಗತಿಯ ಎಂಟು ವಿದ್ಯಾರ್ಥಿಗಳು ನಿನ್ನೆ  ಸಂಜೆ ಶಾಲೆ ಮುಗಿಸಿಕೊಂಡು ಮನೆಗೆ ಬಂದಿದ್ದ ಬಾಲಕರು ಟ್ಯೂಷನ್‍ಗೆಂದು ಹೋಗಿದ್ದು ಇದುವರೆಗೂ ಮನೆಗೆ ವಾಪಸಾಗಿಲ್ಲ.

ಅತ್ತ ಟ್ಯೂಷನ್‍ ಗೂ ಹೋಗದೇ ಬಾಲಕರು ಎಲ್ಲಿಗೆ ಹೋಗಿದ್ದಾರೆ ಎಂಬ ಬಗ್ಗೆ ಪೋಷಕರಲ್ಲಿ ಸಾಕಷ್ಟು ಆತಂಕ ವ್ಯಕ್ತವಾಗಿದೆ. ಸಂಜೆಯೇ 6 ಮಂದಿ ಬಾಲಕರ ಪೋಷಕರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಓರ್ವ ವಿದ್ಯಾರ್ಥಿಯ ಬಳಿ ಮೊಬೈಲ್ ಇತ್ತು. ಆದರೆ ಮೊಬೈಲ್‍ ಸಂಜೆ ಕಾಮಾಕ್ಷಿಪಾಳ್ಯದಲ್ಲೇ ಸ್ವಿಚ್ ಆಫ್ ಆಗಿರುವುದು ಪೊಲೀಸ್ ತನಿಖೆಯಲ್ಲಿ ಸ್ಪಷ್ಟವಾಗಿದೆ.

ಮನೆ ಬಿಟ್ಟು ಹೋಗಿರುವ ಎಲ್ಲರೂ ಹಣ, ಬಟ್ಟೆ ಏನನ್ನೂ ತೆಗೆದುಕೊಂಡು ಹೋಗಿಲ್ಲವೆಂದು ತಿಳಿದುಬಂದಿದೆ. ಈ ಮಕ್ಕಳೆಲ್ಲರೂ ಟ್ಯೂಷನ್‍ಗೆ ಹೋಗದೇ ಎಲ್ಲಿಗೆ ಹೋಗಿದ್ದಾರೆ ಅನ್ನೋದು ಇದುವರೆಗೂ ಖಚಿತವಾಗಿಲ್ಲ. ಸೃಜನ್ ಶೆಟ್ಟಿ, ರಾಕೇಶ್, ರೇಣು, ಚಂದನ್, ಅನೂಪ್ ಸೇರಿದಂತೆ ಎಂಟು ಬಾಲಕರು ನಾಪತ್ತೆಯಾದವರು. ಸ್ನೇಹಿತರೆಲ್ಲಾ ಒಟ್ಟಾಗಿ ಪ್ರವಾಸಕ್ಕೆ ಹೋಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಮಕ್ಕಳ ಪೋಷಕರೆಲ್ಲರೂ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಬಳಿ ಸೇರಿದ್ದಾರೆ.

ವಿಶೇಷ ತಂಡ ರಚನೆ: ಆರು ವಿದ್ಯಾರ್ಥಿಗಳು ಅನುಮಾನಾಸ್ಪದವಾಗಿ ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿದೆ. ಪಶ್ಚಿಮ ವಿಭಾಗದ ಡಿಸಿಪಿ ರವಿ ಚನ್ನಣ್ಣನವರ್ ಮಕ್ಕಳ ಪತ್ತೆಗಾಗಿ ವಿಜಯನಗರ ಎಸಿಪಿ ಪರಮೇಶ್ವರ ಹೆಗಡೆ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದಾರೆ. ಸಾರ್ವಜನಿಕರಿಗೆ ಮಕ್ಕಳ ಬಗ್ಗೆ ಮಾಹಿತಿ ಲಭ್ಯವಾದಲ್ಲಿ ಕೂಡಲೇ ಪೊಲೀಸರನ್ನು ಸಂಪರ್ಕಿಸಬೇಕೆಂದು ಡಿಸಿಪಿ ರವಿ ಚನ್ನಣ್ಣನವರ್ ಮನವಿ ಮಾಡಿಕೊಂಡಿದ್ದಾರೆ.

ಮಾಧ್ಯಮಗಳ ಜತೆ ಮಾತನಾಡಿದ ಡಿಸಿಪಿ ರವಿ ಚನ್ನಣ್ಣನವರ್, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಸೋಮವಾರ ಸಂಜೆ 4 ಗಂಟೆ ಸುಮಾರಿಗೆ 6 ಮಕ್ಕಳು ನಾಪತ್ತೆಯಾಗಿರುವ ಬಗ್ಗೆ ಮಕ್ಕಳ ಪೋಷಕರು ದೂರು ನೀಡಿದ್ದಾರೆ. ಕಾಣೆಯಾದ ಮಕ್ಕಳೆಲ್ಲರೂ ಸೆಂಟ್ ಲಾರೆನ್ಸ್ ಶಾಲೆಯಲ್ಲಿ ಓದುತ್ತಿದ್ದರು. ನಿನ್ನೆ ಮನೆಗೆ ಬಂದ ನಂತರ ಮಕ್ಕಳು ಟ್ಯೂಷನ್‍ಗೆ ಹೋಗುತ್ತೇವೆ ಎಂದು ಮನೆಯಿಂದ ಹೋಗಿ ನಂತರ ನಾಪತ್ತೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

ವಿಜಯನಗರ ಎಸಿಪಿ, ಕಾಮಾಕ್ಷಿಪಾಳ್ಯ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿದೆ. ಪೊಲೀಸರು ಈಗಾಗಲೇ ಬೇರೆ ಬೇರೆ ಕಡೆ ಮಕ್ಕಳನ್ನ ಹುಡುಕುತ್ತಿದ್ದಾರೆ. 6 ಜನ ಮಕ್ಕಳಲ್ಲಿ ಒಬ್ಬನ ಬಳಿ ಮೊಬೈಲ್ ಇತ್ತು ಅನ್ನುವುದು ಗೊತ್ತಾಗಿದೆ. ಆದ್ರೆ ಆತನ ಮೊಬೈಲ್ ನಾಟ್ ರೀಚಬಲ್ ಬರುತ್ತಿದೆ. ಆದಷ್ಟು ಬೇಗ ಮಕ್ಕಳನ್ನು ಪತ್ತೆ ಹಚ್ಚಲಾಗುವುದು. ಈಗಾಗಲೇ ಎಲ್ಲಾ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ತಿಳಿಸಲಾಗಿದೆ. ಮಕ್ಕಳು ಎಲ್ಲಿಯಾದ್ರು ಕಂಡಲ್ಲಿ ಸಾರ್ವಜನಿಕರು ಹತ್ತಿರದ ಪೊಲೀಸರಿಗೆ ತಿಳಿಸುವಂತೆ ಡಿಸಿಪಿ ಮನವಿ ಮಾಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ