ನಿಲ್ಲಿಸಿದ್ದ ಆಟೋಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

A gang burned an auto rickshaw

19-06-2018

ಬೆಂಗಳೂರು: ಕೆಪಿ ಅಗ್ರಹಾರದ ಭುವನೇಶ್ವರಿನಗರ ಸಮೀಪದ ಅಯ್ಯಪ್ಪ ದೇವಸ್ಥಾನ ಬಳಿ ನಿನ್ನೆ ಮಧ್ಯರಾತ್ರಿ ಮನೆ ಮುಂಭಾಗದಲ್ಲಿ ನಿಲ್ಲಿಸಿದ್ದ ಆಟೋಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಅಯ್ಯಪ್ಪ ದೇವಸ್ಥಾನ ಬಳಿ ಸುನೀಲ್ ಎಂಬುವವರು ರಾತ್ರಿ 1.30ರ ವರೆಗೂ ಬಾಡಿಗೆಗೆ ಹೋಗಿ ಮನೆಗೆ ವಾಪಸ್ಸಾಗಿ ಆಟೋವನ್ನು ಮನೆಯ ಮುಂಭಾಗ ನಿಲ್ಲಿಸಿದ್ದರು. ಬೆಳಗಿನ ಜಾವ 3.30ರ ಸುಮಾರಿಗೆ ದುಷ್ಕರ್ಮಿಗಳು ಆಟೋಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಆಟೋರಿಕ್ಷಾ ಸುಟ್ಟು ಭಸ್ಮವಾಗಿದೆ.

ಸುನೀಲ್ ಕುಟುಂಬಕ್ಕೆ ಜೀವನಾಧಾರವಾಗಿದ್ದ ಆಟೋ ಬೆಂಕಿಗೆ ಆಹುತಿಯಾಗಿದ್ದು, ಇದೀಗ ಘಟನೆಯಿಂದ ಕುಟುಂಬ ಕಂಗಾಲಾಗಿದೆ. ಕೆಪಿ ಅಗ್ರಹಾರ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Auto rikshwa Police ದೇವಸ್ಥಾನ ದುಷ್ಕರ್ಮಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ