ಇಎಸ್ಐ ಆಸ್ಪತ್ರೆ ಅವ್ಯವಸ್ಥೆ: ಕಾರ್ಮಿಕ ಸಚಿವ ಕೆಂಡಾಮಂಡಲ

labour minister Venkataramanappa visited ESI hospital indranagar

19-06-2018

ಬೆಂಗಳೂರು: ಕಾರ್ಮಿಕ ಸಚಿವ ವೆಂಕಟರಮಣಪ್ಪ ಅವರು ಇಂದಿರಾನಗರದಲ್ಲಿರುವ ಇಎಸ್ಐ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿ ಸ್ವಚ್ಛತೆ ಇಲ್ಲದಿರುವುದನ್ನು ಕಂಡು ಸಚಿವರು ಗರಂ ಆದರು. ಕೊಠಡಿಗಳಲ್ಲಿ ಸ್ವಚ್ಛತೆ ಕಾಪಾಡಿಲ್ಲ ಏಕೆ ಎಂದು ಆಸ್ಪತ್ರೆ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆಯ ಸಂಪೂರ್ಣ ಪರಿಶೀಲನ ನೆಡೆಸಿದ ಸಚಿವರು ಹರಿದ ಬೆಡ್ ನೋಡಿ ಕೆಂಡಾಮಂಡಲರಾದರು. ಕೂಡಲೆ ಬೆಡ್ ಚೇಂಜ್ ಮಾಡುವಂತೆ ಸೂಚನೆ ನೀಡಿದರು.

ನಂತರದಲ್ಲಿ ಶೌಚಾಲಯದ ಅವ್ಯವಸ್ಥೆ ಕಂಡ ಸಚಿವ ವೆಂಕಟರಮಣಪ್ಪ ಅವರ ಪಿತ್ತ ನೆತ್ತಿಗೇರಿತ್ತು ಅನ್ನಿಸುತ್ತದೆ, ಈ ಕುರಿತು ಅಲ್ಲೇ ಇದ್ದ ಸಿಬ್ಬಂದಿಯನ್ನು ‘ನಿಮ್ಮನ್ನು ಮನೆಗೆ ಕಳಿಸುತ್ತೇನೆ’ ಎಂದು ಎಚ್ಚರಿಕೆ ನೀಡಿದರು. ಇನ್ನು ರೋಗಿಗಳು ಆಸ್ಪತ್ರೆಯಲ್ಲಿ ತಮಗಾಗುತ್ತಿರುವ ತೊಂದರೆಗಳ ಬಗ್ಗೆ ಸಚಿವರ ಬಳಿ ಹೇಳಿಕೊಂಡರು.

 


ಸಂಬಂಧಿತ ಟ್ಯಾಗ್ಗಳು

labour minister Venkataramanappa ರೋಗಿಗಳು ಕೊಠಡಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ