ಕಾರು ಸಮೇತ ಹೊಳೆಗೆ ಹಾರಿ ಯವಕ ಆತ್ಮಹತ್ಯೆ

A Man suicide with his car in pond

19-06-2018

ಕೊಡಗು: ಜಿಲ್ಲೆಯ ಕೂಟುಹೊಳೆ ಎಂಬ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲೇ ಬೇಕು ಎಂದು ನಿರ್ಧರಿಸಿದಂತಿದ್ದ ಯುವಕನೊಬ್ಬ ತನ್ನ ಕಾರಿನೊಂದಿಗೆ ನೀರಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ, ಈ ವೇಳೆ ಕಾರು ನೀರಲ್ಲಿ ಮುಳುಗದ ಹಿನ್ನೆಲೆ ನೀರಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ. ಮಡಿಕೇರಿ ನಗರದ ಶಮೀರ್(36) ಆತ್ಮಹತ್ಯೆಗೆ ಶರಣಾದ ಯುವಕ.

ಬೆಳಗಿನ ಜಾವ ಕೂಟುಹೊಳೆಗೆ ಕಾರನ್ನು ಇಳಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ, ಕಾರು ಇಳಿಯದ ಕಾರಣ ಕಾರಿನಿಂದ ಹೊರ ಬಂದು ನೀರಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಸಂಬಂಧಿತ ಟ್ಯಾಗ್ಗಳು

sucide Car ಪ್ರಾಣ ಯುವಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ