ಗುಲ್ಬರ್ಗಾ ವಿವಿಯ ಯಡವಟ್ಟು: ವಿದ್ಯಾರ್ಥಿಗಳ ಆಕ್ರೋಶ

PG Students

19-06-2018

ರಾಯಚೂರು: ಸಮಯಕ್ಕೆ ಪ್ರಶ್ನೆ ಪತ್ರಿಕೆ ಬಾರದ ಹಿನ್ನೆಲೆ ವಿದ್ಯಾರ್ಥಿಗಳು ಆತಂಕಗೊಂಡಿರುವ ಘಟನೆ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ನಡೆದಿದೆ. ಎಂ.ಕಾಂ ನ ದ್ವೀತಿಯ ಸೆಮಿಸ್ಟರ್ ಪಬ್ಲಿಕ್ ರಿಲೇಷನ್  ಪ್ರಶ್ನೆ ಪತ್ರಿಕೆ ಇನ್ನೂ ಕಾಲೇಜಿಗೆ ತಲುಪಿಲ್ಲ. 10 ಗಂಟೆಗೆ ಶುರುವಾಗಬೇಕಾದ ಪರೀಕ್ಷೆ ಇನ್ನೂ ಪ್ರಾರಂಭವಾಗಿಲ್ಲ. ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಬೇಜವಾಬ್ದಾರಿತನಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ವಿಶ್ವವಿದ್ಯಾಲಯದ ತಪ್ಪಿನಿಂದಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯದ ಹಾಗಾಗಿದೆ. ಗುಲಬುರ್ಗಾ ವಿವಿ ಪರೀಕ್ಷಾ ವಿಭಾಗದವರು ಇ-ಮೇಲ್ ಮುಖಾಂತರ ಪ್ರಶ್ನೆ ಕಳುಹಿಸುವುದಾಗಿ ಹೇಳಿದ್ದರು. ಆದರೆ ಇದುವರೆಗೂ ಮೇಲ್ ಬಾರದ ಹಿನ್ನೆಲೆ ಪರೀಕ್ಷೆ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ. ಗುಲಬುರ್ಗಾ ವಿವಿಯ ಪರೀಕ್ಷಾ ವಿಭಾಗದ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ