ಆಟವಾಡಲು ಹೋಗಿದ್ದ ಮಗು ಶವವಾಗಿ ಪತ್ತೆ!

The kid who was gone to play was found dead!

19-06-2018

ಹಾವೇರಿ: ಆಟವಾಡಲು ಹೋಗಿ ನಾಪತ್ತೆಯಾಗಿದ್ದ ಮಗು ಶವವಾಗಿ ಪತ್ತೆಯಾಗಿದೆ. ಜಿಲ್ಲೆಯ ಕುಸುನೂರ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದೆ. ಮೀನಾದ್ (6) ನಾಪತ್ತೆಯಾಗಿದ್ದ ಮಗು ಇದೀಗ ಮನೆಯ ಹಿಂದಿನ ಗುಂಡಿಯಲ್ಲಿ ಶವವಾಗಿ ಪತ್ತೆಯಾಗಿದೆ. ಅಬ್ಬಸಾಲಿ ಕಿರವಾಡಿ ಎಂಬುವವರು ಮಗಳು ಮೀನಾದ್ ನಿನ್ನೆ ಮಧ್ಯಾಹ್ನ ಆಟವಾಡಲು ಹೋಗಿತ್ತು. ಸಂಜೆಯಾದರೂ ಮನೆಗೆ ಬಾರದಿದ್ದು ಪೋಷಕರು ಗಾಬರಿಗೊಂಡು ಮನೆಯ ಸುತ್ತಮುತ್ತಲ ಬೀದಿ ಎಲ್ಲಾ ಕಡೆ ಹುಡುಕಿದ್ದರು. ಆದರೆ, ಇಂದು ಬೆಳಿಗ್ಗೆ ಮನೆಯ ಹಿಂದೆ ಒಮ್ಮೆ ಪರಿಶೀಲಿಸಲು ಪೋಷಕರು ಹೋದಾಗ ಗುಂಡಿಯಲ್ಲಿ ಮಗು ಇರುವುದು ಕಂಡು ಬಂದಿದ್ದು ಅದಾಗಲೆ ಮೃತಪಟ್ಟಿತ್ತು ಎಂದು ತಿಳಿದು ಬಂದಿದೆ. ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.


ಸಂಬಂಧಿತ ಟ್ಯಾಗ್ಗಳು

child death ಪೋಷಕರು ನಾಪತ್ತೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ