ಮಗಳ ಮದುವೆಗೆಂದು ಕೂಡಿಟ್ಟಿದ್ದ ಹಣ,ಚಿನ್ನ ಕಳ್ಳರ ಪಾಲು

Bidar: Robbery in home gold, money looted

18-06-2018

ಬೀದರ್: ಮಗಳ ಮದುವೆಗೆಂದು ಕೂಡಿಟ್ಟ ಹಣ, ಒಡವೆ ಕಳ್ಳರ ಪಾಲಗಿದೆ. ಜಿಲ್ಲೆಯ ಔರಾದ್ ತಾಲ್ಲೂಕಿನ ಎಂ.ನಾಗೂರ್ ಗ್ರಾಮದಲ್ಲಿ ಘಟನೆ ನಡೆದಿದೆ. ತಡರಾತ್ರಿ ಮನೆ ಮಾಳಿಗೆಯಿಂದ ಇಳಿದ ಕಳ್ಳರು ಎರಡು ತೊಲೆ ಚಿನ್ನ, 10 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ. ಹಾವಪ್ಪ ಸೊರಳೆ ಎಂಬುವರ ಮಗಳ ಮದುವೆಗೆಂದು‌ ನಗುದು, ಚಿನ್ನ ಕೂಡಿಟ್ಟಿದ್ದರು. ಆದರೆ, ಕಳ್ಳರು ಎಲ್ಲವನ್ನೂ ದೋಚಿಕೊಂಡು ಹೋಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಸಂತಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರಿಗಾಗಿ ಹುಡುಕಾಟ ನಡೆದಿದೆ.


ಸಂಬಂಧಿತ ಟ್ಯಾಗ್ಗಳು

Robbery Marrigae ಮದುವೆ ಕಳ್ಳರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ