‘ಇದು ಸೌಹಾರ್ದಯುತ ಭೇಟಿ’-ಸಿಎಂ ಕುಮಾರಸ್ವಾಮಿ

CM kumaraswamy met AICC president Rahul gandhi at delhi

18-06-2018

ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಸಿಎಂ ಕುಮಾರಸ್ವಾಮಿ ಅವರು ಇಂದು ದೆಹಲಿಯಲ್ಲಿ ಭೇಟಿಯಾದರು. ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ ಈ ಭೇಟಿ ಸೌಹಾರ್ದಯುತವಾದದ್ದು. ರಾಹುಲ್ ಗಾಂಧಿ ಜೊತೆಗೆ ಹಲವಾರು ವಿಷಯಗಳ ಕುರಿತು ಚರ್ಚೆ ಮಾಡಿದ್ದೇನೆ. ರಾಜ್ಯದಲ್ಲಿ ಮೈತ್ರಿ ಸರ್ಕಾರದ ಮುಂದಿನ ಕಾರ್ಯಯೋಜನೆಗಳ ಕುರಿತು ಚರ್ಚಿಸಲಾಗಿದೆ. ರಾಜ್ಯದ ಅಭಿವೃದ್ಧಿ ವಿಚಾರಗಳ ಬಗ್ಗೆ ಅವರು ಮಾಹಿತಿ ಪಡೆದಿದ್ದಾರೆ. ಅಭಿವೃದ್ಧಿ ಕಾರ್ಯಗಳ ಮೂಲಕ ಸುಭದ್ರ ಸರ್ಕಾರ ನೀಡುವ ಬಗ್ಗೆ ಮಾತುಕತೆ ನಡೆದಿದೆ ಎಂದರು. 

'ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ವಿಚಾರವಾಗಿ ಪ್ರಧಾನಿ ಅವರನ್ನು ಭೇಟಿಯಾಗುತ್ತಿದ್ದೇನೆ.  ಇತ್ತಿಚೇಗೆ ಹೊರಡಿಸಿದ್ದ ಗೆಜೆಟ್ ನಲ್ಲಿ ಹಲವು ಲೋಪಗಳಿವೆ. ಅವುಗಳನ್ನು ಪ್ರಧಾನಿ ಗಮನಕ್ಕೆ ತರುವ ಹಿನ್ನೆಲೆ ಭೇಟಿ ಮಾಡುತ್ತಿದ್ದೇನೆ' ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದರು.

ಪ್ರತಿ ಹತ್ತು ದಿನಕ್ಕೆ ಸಭೆ ಮಾಡಿ ನೀರು ಬಿಡಬೇಕು ಎಂದು ಗೆಜೆಟ್ ನಲ್ಲಿ ಹೇಳಿದೆ. ಇದು ಅವೈಜ್ಞಾನಿಕ ತಿರ್ಮಾನ, ರಾಜ್ಯದ ರೈತರು ಯಾವ ಬೆಳೆ ಬೆಳೆಯಬೇಕು ಎಂಬುದು ಪ್ರಾಧಿಕಾರ ತಿರ್ಮಾನ ಮಾಡಲಿದೆ. ಈ ನಿರ್ಧಾರ ನಮ್ಮ ರಾಜ್ಯದ ರೈತರಿಗೆ ಮಾರಕವಾಗಲಿದೆ. ನಮ್ಮ ಡ್ಯಾಂಗಳಲ್ಲಿನ ನೀರು ಬಿಡುವ ಬಗ್ಗೆ ರಾಜ್ಯ ಸರ್ಕಾರಕ್ಕೂ ಅಧಿಕಾರ ನೀಡಬೇಕು. ತಮಿಳುನಾಡು ಡ್ಯಾಂಗಳಲ್ಲಿ ನೀರು ಹೆಚ್ಚುವರಿ ಇದ್ದು ನಾವು ನೀರು ಬಿಟ್ಟರೆ ಹೆಚ್ಚುವರಿ ನೀರು ಸಮುದ್ರಕ್ಕೆ ವ್ಯರ್ಥವಾಗಿ ಹರಿಯುತ್ತದೆ.

ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ವಿಚಾರವಾಗಿ ಪಾರ್ಲಿಮೆಂಟ್ ನಲ್ಲಿ ಚರ್ಚೆ ನಡೆಸದೆಯೇ ಗೆಜೆಟ್ ಹೊರಡಿಸಲಾಗಿದೆ. ಗೆಜೆಟ್ ಗೆ ರಾಜ್ಯ ಸರ್ಕಾರದಿಂದ ಇನ್ನು ಒಪ್ಪಿಗೆ ಕೊಟ್ಟಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

 

 


ಸಂಬಂಧಿತ ಟ್ಯಾಗ್ಗಳು

H.D.Kumaraswamy Rahul Gandhi ಪಾರ್ಲಿಮೆಂಟ್ ಗೆಜೆಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ