ಸಿದ್ದರಾಮಯ್ಯನವರೇ ಈಗಲೂ ನನಗೆ ಮುಖ್ಯಮಂತ್ರಿ: ಸಚಿವ ಪುಟ್ಟರಂಗಶೆಟ್ಟಿ

Siddaramaiah is still the Chief Minister for me: Minister Puttarangashetty

18-06-2018

ಚಾಮರಾಜನಗರ: ತಾನು ಸಚಿವನಾಗಲು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾರಣ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಹೇಳಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡಿದ ಸಚಿವರು, 'ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ. 'ನನಗೆ ಸಿದ್ದರಾಮಯ್ಯ ಅವರೇ ಈಗಲೂ ಮುಖ್ಯಮಂತ್ರಿ ಎಂದರು. ಹಿಂದುಳಿದ ವರ್ಗದ ಏಕೈಕ ಶಾಸಕನಾಗಿದ್ದ ನನಗೆ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ನೀಡಿರೊದು ಸಂತಸವಾಗಿದೆ'. 'ಚಾಮರಾಜನಗರದಿಂದ ಶಾಸಕರಾದವರಿಗೆ ಸಚಿವ ಸ್ಥಾನ ನೀಡಿರುವುದು ಇದೇ ಮೊದಲು. ಸಿದ್ದರಾಮಯ್ಯ ಅವರು ಸಚಿವ ಸ್ಥಾನಕೊಡಿಸುವ ಮೂಲಕ ಚಾಮರಾಜನಗರಕ್ಕೆ ಅಂಟಿದ್ದ ಕಳಂಕ ದೂರ ಮಾಡಿದ್ದಾರೆ' ಎಂದು ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ