ಸರಗಳ್ಳತನದಲ್ಲಿ ಶತಕ ಬಾರಿಸಿದ್ದವನ ಬಂಧನ

chain snatcher arrested

18-06-2018

ಬೆಂಗಳೂರು: ಸರಗಳ್ಳತನದಲ್ಲಿ ಶತಕ ಬಾರಿಸಿ ನಿನ್ನೆ ರಾತ್ರಿ ಸಿಕ್ಕಿ ಬಿದ್ದು ಮುಂಜಾನೆ ಮೂತ್ರ ವಿಸರ್ಜನೆ ನೆಪ ಮಾಡಿ ಕತ್ತಲಲ್ಲಿ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದ ಕುಖ್ಯಾತ ಸರಗಳ್ಳ ಅಚ್ಚುತ್ ಕುಮಾರ್ ಗಣಿಗೆ ಜಂಟಿ ಕಾರ್ಯಾಚರಣೆ ನಡೆಸಿದ ಪಶ್ಚಿಮ ವಿಭಾಗದ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

ಕುಂಬಳಗೂಡುವಿನ ಅಚ್ಚುತ್ ಕುಮಾರ್ ಗಣಿ (31)ಪೊಲೀಸರ ಗುಂಡೇಟಿನಿಂದ ಬಲಗಾಲಿಗೆ ಗಾಯಗೊಂಡಿದ್ದು ಆತನನ್ನು ಸ್ಥಳೀಯ ಆಸ್ಪತ್ರಗೆ ದಾಖಲಿಸಲಾಗಿದೆ. ಪ್ರಾಣಪಾಯದಿಂದ ಪಾರಾಗಿರುವ ಗಣಿ ಚೇತರಿಸಿಕೊಂಡ ನಂತರ ಬಂಧಿಸಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ.

ಆರೋಪಿಯಿಂದ ಚಾಕು ಇನ್ನಿತರ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ಬೆಂಗಳೂರು ಸೇರಿ ರಾಜ್ಯದ ವಿವಿದೆಢೆ ಆರೋಪಿ ನಡೆಸಿರುವ 100ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣಗಳ ಮಾಹಿತಿ ಪಡೆದುಕೊಳ್ಳಲಾಗುತ್ತದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಚನ್ನಣ್ಣವರ್ ತಿಳಿಸಿದ್ದಾರೆ.

ಪಶ್ಚಿಮ ವಿಭಾಗದಲ್ಲಿ ಹೆಚ್ಚುತ್ತಿರುವ ಸರಗಳ್ಳತನ್ನದ ಹಿನ್ನೆಲೆಯಲ್ಲಿ ಜ್ಞಾನ ಭಾರತಿ ಹಾಗೂ ಕೆಂಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಗಸ್ತು ಹೆಚ್ಚಿಸಿ ನಿರಂತರ ಕಾರ್ಯಾಚರಣೆ ನಡೆಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿ ಅಲರ್ಟ್ ಮಾಡಲಾಗಿತ್ತು. ಅದರಂತೆ ರಾತ್ರಿ 8ರ ವೇಳೆ ವಾಹನಗಳ ಕಾರ್ಯಚರಣೆ ನಡೆಸುತ್ತಿದ್ದಾಗ ಜ್ಞಾನಭಾರತಿ ಸಮೀಪ ಪಲ್ಸರ್ ಬೈಕ್‍ನಲ್ಲಿ ಅನುಮಾಸ್ಪಾದವಾಗಿ ಹೋಗುತ್ತಿದ್ದ ಯುವಕನೊಬ್ಬ ಹೋಗುತ್ತಿದ್ದ. ಕೂಡಲೇ ಬೈಕ್ ಬೆನ್ನಟ್ಟಿದ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಪಲ್ಸರ್ ಬೈಕ್‍ಗೆ ಹಿಂದಿನಿಂದ ಪೊಲೀಸರ ಬೈಕ್ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಆತನನ್ನು ಹಿಡಿಯಲೂ ಚಂದ್ರ ಕುಮಾರ್ ಹೋದಾಗ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ ತಕ್ಷಣವೇ ಸ್ಥಳಕ್ಕೆ ಬಂದ ಹೆಚ್ಚಿನ ಸಿಬ್ಬಂದಿ ಬೆನ್ನಟ್ಟಿ ಆತನನ್ನು ಹಿಡಿದುಕೊಂಡು ವಿಚಾರಣೆ ನಡೆಸಿದಾಗ ಕುಖ್ಯಾತ ಸರಗಳ್ಳ ಗಣಿ ಎನ್ನುವುದು ಪತ್ತೆಯಾಗಿದೆ.

ಬೆಂಗಳೂರು, ತುಮಕೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಗದಗ ಸೇರಿ ರಾಜ್ಯದ ಹಲವೆಡೆ 100ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣಗಳಲ್ಲಿ ಕುಖ್ಯಾತ ಸರಗಳ್ಳ ಅಚ್ಚುತ್ ಕುಮಾರ್ ಭಾಗಿಯಾಗಿರುವ ಶಂಕೆಯಿದೆ ಆರೋಪಿಯು ಮೋಜಿನ ಜೀವನ ನಡೆಸಲು ಪಲ್ಸರ್ ಬೈಕ್‍ನಲ್ಲಿ ಸಂಚರಿಸುತ್ತಾ ಚಾಕು ಇನ್ನಿತರ ಮಾರಕಾಸ್ತ್ರಗಳೊಂದಿಗೆ ಒಂಟಿ ಮಹಿಳೆಯರ ಚಿನ್ನದ ಸರ ಕಸಿಯುತ್ತಿದ್ದ  ಪ್ರತಿರೋಧ ತೋರಿದವರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣಗಳನ್ನು ದೋಚುತ್ತಿದ್ದ ಗಣಿಯ ಬಂಧನಕ್ಕೆ ಹಲವು ದಿನಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿತ್ತು ಸೋಮವಾರ ಆತನನ್ನು ಬಲೆಗೆ ಕೆಡವುವಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿರುವ ಕೇಂಗೇರಿ ಹಾಗೂ ಜ್ಞಾನಭಾರತಿ ಪೊಲೀಸರು ಕಾರ್ಯವನ್ನು ಪಶ್ಚಿಮ ವಿಭಾಗದ ಡಿಸಿಪಿ ರವಿ ಚನ್ನಣ್ಣವರ್ ಶ್ಲಾಘಿಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

chain snatcer robbery ಶಂಕೆ ಕುಖ್ಯಾತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ