ಮುತಾಲಿಕ್ ಗೆ ಸಿ.ಎಂ.ಇಬ್ರಾಹಿಂ ಟಾಂಗ್18-06-2018

ಬೆಂಗಳೂರು: ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಂಹಿಂ ವಿರುದ್ಧ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಾಡಿರುವ ಆರೋಪಕ್ಕೆ ಸಿ.ಎಂ.ಇಬ್ರಾಹಿಂ ಟಾಂಗ್ ಕೊಟ್ಟಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಇಬ್ರಾಹಿಂ ಅಮಾಯಕ ಯುವಕರ ತಲೆ ಕೆಡಿಸಿದ್ದು ಯಾರು? ನಾಲ್ಕೈದು ಗುಂಪು ಮಾಡಿ ಟ್ರೈನಿಂಗ್ ಕೊಟ್ಟಿದ್ದು ಯಾರು? ಇವರನ್ನು ತಯಾರು ಮಾಡುವ ಹೆಡ್ ಆಫೀಸ್ ಯಾವುದು ಎಂದೆಲ್ಲಾ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

'ಮನುಷ್ಯನ ಜೀವನ ಶಾಶ್ವತವಲ್ಲ. ರಾಜಕಾರಣ ನಾಲ್ಕೈದು ವರ್ಷದ್ದು. ಅಡ್ವಾಣಿ, ವಾಜಪೇಯಿಯವರನ್ನು ನಾವು ಗುಣಗಾನ ಮಾಡುತ್ತಿದ್ದೆವು. ಹಿಂದೂ ಭಯೋತ್ಪಾದನೆ ಯಾಕೆ ಮಾಡಬೇಕು? ಹೇಗೆ ಬೇಕೋ ಹಾಗೆ ಮಾತನಾಡಿ ದೇಶ ಹಾಳುಮಾಡುವುದು ಬೇಡ. ಮುತಾಲಿಕ್ ಯಾರು ಏನು ಅನ್ನುವುದು ಎಲ್ಲರಿಗೂ ಗೊತ್ತಿದೆ. ಇದಕ್ಕಿಂತ ಬೇರೇನು ನಾನು ಹೇಳುವುದಿಲ್ಲ' ಎಂದರು.

ಸಭಾನಾಯಕಿಯಾಗಿ ಜಯಮಾಲಾಗೆ ಅವಕಾಶ ನೀಡುವ ವಿಚಾರದ ಕುರಿತು, ಅವರು ಒಬ್ಬ ಹೆಣ್ಣು ಮಗಳು, ಜೊತೆಗೆ ಅವಕಾಶ ವಂಚಿತ ಸಮುದಾಯದ ಹೆಣ್ಣಮಗಳು, ಅವರಿಗೂ ಒಂದು ಅವಕಾಶ ಕೊಡಲಿ ಬಿಡಿ ಅದಕ್ಕೆ ಯಾಕೆ ವಿರೋಧಿಸಬೇಕು ಎಂದು ಜಯಮಾಲಾ ಪರ ಸಿ.ಎಂ.ಇಬ್ರಾಹಿಂ ಮಾತನಾಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ