ಮಾಜಿ ಸಿಎಂಗೆ ಅಭಿಮಾನಿಯೊಬ್ಬರಿಂದ ಬಂದಿದೆ ಆಫರ್!

An Offer for former CM siddaramaiah from his Fan!

18-06-2018

ಬಾಗಲಕೋಟೆ: ಮಾಜಿ ಸಿಎಂ ಹಾಗು ಬಾದಾಮಿ ಶಾಸಕರಾದ ಸಿದ್ದರಾಮಯ್ಯ ಅವರಿಗೆ ಅಭಿಮಾನಿಯೊಬ್ಬರು ಬಾದಾಮಿಯಲ್ಲಿ ಉಚಿತ ಬಾಡಿಗೆ ಮನೆ ಆಫರ್ ನೀಡಿದ್ದಾರೆ. ಬಾದಾಮಿ ಪಟ್ಟಣದ ಜಯನಗರದ ಎಸ್.ಎಫ್.ಹೊಸಗೌಡರ ಕಾಲೋನಿಯಲ್ಲಿರುವ ಮನೆಯನ್ನು ಸಿದ್ದರಾಮಯ್ಯ ಅಭಿಮಾನಿ ಶಂಕರಗೌಡ ಕೆಳಗಿನಮನಿ ಎಂಬುವರು ನೀಡಲು ಮುಂದಾಗಿದ್ದಾರೆ. ಶಂಕರಗೌಡರ ಕೆಳಗಿನಮನಿ ಅವರೊಂದಿಗೆ ಈಗಾಗಲೇ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಅವರು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಐತಿಹಾಸಿಕ ಬಾದಾಮಿಯನ್ನು ಅಭಿವೃದ್ಧಿ ಮಾಡಲಿ ಎನ್ನುವ ಮಹದಾಸೆ ಮತ್ತು ಮಾಜಿ ಸಿಎಂ ಆಗಿರುವುದರಿಂದ ಉಚಿತ ಬಾಡಿಗೆ ಮನೆ ಆಫರ್ ನೀಡಿದ್ದೇನೆ ಎಂದು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

siddaramaiah Badami ಅಭಿಮಾನಿ ಬಾಡಿಗೆ ಮನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ