ಕೂದಲೆಳೆ ಅಂತರದಲ್ಲಿ ಪಾರಾದ ಬಸ್

An Banyan tree fallen on road

18-06-2018

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಗಾಂಧಿನಗರದ ಮೈಸೂರು ರಸ್ತೆಯಲ್ಲಿ ಭಾರೀ ಅವಘಡ ಒಂದು ತಪ್ಪಿದೆ. ಹೆದ್ದಾರಿ ಮಧ್ಯೆ ಬೃಹತ್ ಆಲದ ಮರವೊಂದು ಉರುಳಿ ಬಿದ್ದಿದೆ. ಇದೇ ಮಾರ್ಗವಾಗಿ ಕೆಎಸ್ಆರ್ಟಿಸಿ ಬಸ್ ಬರುತ್ತಿತ್ತು. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಬಚಾವಾಗಿದ್ದಾರೆ. ಬಸ್ ಮುಂದೆ ಹೋದ ನಂತರ ಹೆದ್ದಾರಿಗೆ ಮರ ಉರುಳಿ ಬಿದ್ದಿದೆ. ಒಂದು ವೇಳೆ ಕೆಎಸ್ಆರ್ಟಿಸಿ ಬಸ್ ಮೇಲೆ ಮರ ಬಿದ್ದಿದ್ದರೆ ದೊಡ್ಡ ಅನಾಹುತವೇ ನಡೆಯತ್ತಿತ್ತು. ಬಸ್ ಮುಂದೆ ಹೋದ ನಂತರ ಮರ ಬಿದ್ದದ್ದನ್ನು ಕಂಡು ಕಂಡು ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.


ಸಂಬಂಧಿತ ಟ್ಯಾಗ್ಗಳು

KSRTC Banyan tree ಆಲದ ಮರ ಅನಾಹುತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ