ತಲ್ವಾರ್ ನಿಂದ ಕೇಕ್ ಕತ್ತರಿಸಿದ ರೌಡಿ ಶೀಟರ್!

Rowdy birthday celebration controversy!

18-06-2018

ಹುಬ್ಬಳ್ಳಿ: ರೌಡಿ ಶೀಟರ್ ಒಬ್ಬ ತನ್ನ ಹುಟ್ಟು ಹಬ್ಬದ ನಿಮಿತ್ತ ತಲ್ವಾರ್ ನಿಂದ ಕೇಕ್ ಕತ್ತರಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ರೌಡಿ ಚೇತನ್ ಹಿರೇಕೆರೂರು ಹುಟ್ಟುಹಬ್ಬ ಆಚರಣೆ ವೇಳೆ ಘಟನೆ ನಡೆದಿದೆ. ಇತ್ತೀಚೆಗಷ್ಟೇ ಹುಬ್ಬಳ್ಳಿಯಲ್ಲಿ ಶುಭಂ ಬಿಜವಾಡ ತಲ್ವಾರಿನಿಂದ ಕೇಕ್ ಕತ್ತರಿಸಿದ್ದ. ಈ ಪ್ರಕರಣ ಮಾಸುವ ಮುನ್ನವೇ ಈ ರೀತಿಯ ಮತ್ತೊಂದು ಘಟನೆ ನಡೆದಿದೆ. ಇದೀಗ ವೀಡಿಯೋ ಸಾಮಾಜಿಕ‌ ಜಾಲ ತಾಣದಲ್ಲಿ ವೈರಲ್ ಆಗಿದೆ. ಈ ಕುರಿತು ಹುಬ್ಬಳ್ಳಿ- ಧಾರವಾಡ ಪೊಲೀಸರ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘಿಸಿ, ಜನರಲ್ಲಿ ಭಯ ಭೀತಿ‌ ಉಂಟುಮಾಡುತ್ತಿದ್ದರೂ ಪೊಲೀಸರು ಮೌನ ವಹಿಸಿರುವುದ್ದಕ್ಕೆ, ಹುಬ್ಬಳ್ಳಿ ಧಾರವಾಡದಲ್ಲಿ ಕಾನೂನಿಗೆ ಬೆಲೆ ಇಲ್ವಾ.? ಎಂಬ ಪ್ರೆಶ್ನೆಗಳು ಕೇಳಿಬರುತ್ತಿವೆ.


ಸಂಬಂಧಿತ ಟ್ಯಾಗ್ಗಳು

Rowdy Birthday ಸಾರ್ವಜನಿಕ ಟೀಕೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ