ಸಾಲಮನ್ನಾ ಮಾಡದಿದ್ದರೆ ಉಗ್ರ ಹೋರಾಟ: ಚಾಮರಸ ಪಾಟೀಲ್

loan waiver: Chamarasa Patil warning to government

16-06-2018

ದಾವಣಗೆರೆ: ಕಾಂಗ್ರೆಸ್ ನಿಂದ ಬೆಂಬಲ ಪಡೆದು ಅಧಿಕಾರ ಹಿಡಿದ ಕುಮಾರಸ್ವಾಮಿ ಇಲ್ಲಿಯವರೆಗೂ ರೈತರ ಸಾಲಮನ್ನಾ ಮಾಡಿಲ್ಲ. ಅವರು ಪಡೆದ 15ದಿನ ಗಡುವು ಮುಗಿದರೂ ಸಾಲಮನ್ನಾ ಮಾಡಿಲ್ಲ ಎಂದು ರೈತ ಮುಖಂಡ ಚಾಮರಸ ಮಾಲಿ ಪಾಟೀಲ್ ಹೇಳಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಅವರು, ದೊಡ್ಡ ಆಶ್ವಾಸನೆ ನೀಡಿ ಸಾಲಮನ್ನಾ ಮಾಡದಿರುವುದು ರೈತರಲ್ಲಿ ಆತಂಕ ಸೃಷ್ಟಿಯಾಗಿದೆ. ಆಶ್ವಾಸನೆ ನೀಡಿ ಸಾಲಮನ್ನಾ ಮಾಡದ ಹಿನ್ನೆಲೆ ರೈತ ಸಂಘದ ವತಿಯಿಂದ ಸೋಮವಾರದಂದು ಸಾಂಕೇತಿಕ ಪ್ರತಿಭಟನೆ ಮಾಡಲಾಗುವುದು. ತಕ್ಷಣಕ್ಕೆ ಸಾಲಮನ್ನ ಮಾಡದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸಮನ್ವಯ ಸಮಿತಿಯಲ್ಲಿ ಕೆಲವರು ಅಸಾಧ್ಯವಾಗದ ಯೋಜನೆಗಳನ್ನ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹಾಗಾದರೆ ಸಾಲಮನ್ನಾ ಮಾಡಲ್ವ ಎಂದು ಮಾಲಿ ಪಾಟೀಲ್ ಪ್ರಶ್ನಿಸಿದ್ದಾರೆ? ಯಾವುದೇ ಸಬೂಬು ಹೇಳದ 53 ಸಾವಿರ ಕೋಟಿ ಸಾಲಮನ್ನಾ ಮಾಡಬೇಕು, ಇದರಲ್ಲಿ ದೊಡ್ಡ ರೈತರು ಸಣ್ಣ ರೈತರು ಎಂದು ತಾರತಮ್ಯ ಮಾಡಬಾರದು ಎಂದು ರೈತ ಮುಖಂಡ ಚಾಮರಸ ಮಾಲೀ ಪಾಟೀಲ್ ಒತ್ತಾಯಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Farmers Loan waiver ಸಾಂಕೇತಿಕ ಪ್ರತಿಭಟನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ