ಸಮವಸ್ತ್ರ ವಿತರಣೆಯಲ್ಲಿ ಡೀಲ್: ಶೆಟ್ಟರ್ ಗಂಭೀರ ಆರೋಪ

jagadish shettar serious allegation on siddaramaiah

16-06-2018

ಹುಬ್ಬಳ್ಳಿ: ರಾಜ್ಯ ಸಮ್ಮಿಶ್ರ ಸರ್ಕಾರ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮುಖಂಡ ಜಗದೀಶ ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ. ಪ್ರತಿವರ್ಷ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ ವಿತರಿಸುವ ಪದ್ಧತಿಯಿದೆ. ಎಸ್‌ಡಿಎಮ್ ವತಿಯಿಂದ ಬಟ್ಟೆ ತೆಗೆದುಕೊಂಡು ಸ್ಥಳೀಯವಾಗಿ ಹೊಲಿಸಿ ಕೊಡಲಾಗುತ್ತಿತ್ತು. ಇದರಿಂದ 175 ತಾಲ್ಲೂಕಿನಲ್ಲಿ 8ಲಕ್ಷ ಜನರಿಗೆ ಉದ್ಯೋಗ ಸಿಗುತ್ತಿತ್ತು. ಆದರೆ, ಸಿದ್ದರಾಮಯ್ಯ ಅಧಿಕಾರದಿಂದ ಕೆಳಗೆ ಇಳಿಯುವಾಗ ವ್ಯವಸ್ಥೆ ಬುಡಮೇಲು ಮಾಡಿದ್ದಾರೆ. ಯಾರದೋ ಜೊತೆ ಶಾಮೀಲಾಗಿ ವ್ಯತಿರಿಕ್ತ ನಿರ್ಧಾರ ತೆಗೆದುಕೊಂಡಿದ್ದಾರೆ. ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರಗಿ ಡಿವಿಜನ್‌ನಲ್ಲಿ 96 ಕೋಟಿ ರೂಪಾಯಿ ಡೀಲ್ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸಮ್ಮಿಶ್ರ ಸರ್ಕಾರ ಇದನ್ನು ಕಾರ್ಯರೂಪಕ್ಕೆ ತರಲು ಹೊರಟಿದೆ. ಎಸ್‌ಡಿಎಮ್ ಅಧಿಕಾರ ಮೊಟಕು ಮಾಡಲಾಗುತ್ತಿದೆ‌. ದೊಡ್ಡ ಫ್ಯಾಕ್ಟರಿಗಳಿಗೆ ಲಾಭ ಮಾಡಿಕೊಡಲು ಡೀಲ್ ನಡೆದಿದೆ. ಮುಂಬಯಿಯ ಮಫತ್ಲಾಲ್ ಕಂಪನಿ, ರಾಜಸ್ತಾನದ ಸಂಗಮ ಮತ್ತು ಬಾನ್ಸ್‌ ವಾರ್ ಕಂಪನಿ‌ ಜೊತೆ ಡೀಲ್ ಆಗಿದೆ. ಡೀಲ್ ಮಾಡಿಕೊಂಡ ಕಂಪನಿಗಳಿಗೆ ಅನುಕೂಲ ಆಗುವಂತೆ ಬಿಡ್ ನಿಯಮಗಳನ್ನು ಮಾಡಿದ್ದಾರೆ. ಕಮಿಷನ್‌ಗಾಗಿ ರಾಜ್ಯ ಸರ್ಕಾರದಲ್ಲಿರುವ ಪ್ರಭಾವಿಗಳು ಈ ಡೀಲ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ‌.

ಕುಮಾರಸ್ವಾಮಿ ಸಿಎಂ ಆದ ಮೇಲೆ ಮೊದಲ ಹಗರಣ ಹೊರಗೆ ಬಂದಿದೆ. ಈ ಪ್ರಕ್ರಿಯೆ ಕೈಬಿಡುವಂತೆ ಸಿಎಂ ಅವರನ್ನು ಒತ್ತಾಯ ಮಾಡುತ್ತೇನೆ. ಹಳೆಯ ವ್ಯವಸ್ಥೆಯನ್ನು ಮುಂದುವರಿಸಬೇಕು, ಇಲ್ಲದಿದ್ದರೆ ಸಿಎಂ ಮತ್ತು ಶಿಕ್ಷಣ ಸಚಿವರ ವಿರುದ್ಧ ಹಗರಣದ ಆರೋಪ ಮಾಡಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ