ಸರಣಿ ಅಪಘಾತ: ಮೂರು ಕಾರುಗಳು ಜಖಂ

serial accident: 3 cars damaged

16-06-2018

ಬೆಂಗಳೂರು: ಪಾಪರೆಡ್ಡಿ ಪಾಳ್ಯದ ಬಳಿ ನಿನ್ನೆ ರಾತ್ರಿ ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿಕೊಂಡು ಬಂದ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಮುಂದಿನ ಕಾರಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ನಡೆದಿದ್ದು, ಅದೃಷ್ಟವಶಾತ್ ಎಲ್ಲರೂ ಪಾರಾಗಿದ್ದಾರೆ.

ಕಿಮ್ಸ್ ಆಸ್ಪತ್ರೆಯ ಎಂಬಿಬಿಎಸ್ ವಿದ್ಯಾರ್ಥಿ ರಾಹುಲ್ ರಾತ್ರಿ 10ರ ವೇಳೆ ಕಂಠಪೂರ್ತಿ ಕುಡಿದು ಮಹೇಂದ್ರ ಕಾರಿನಲ್ಲಿ ಬರುತ್ತಿದ್ದನು. ಈ ವೇಳೆ ಕ್ರೇಟಾ, ಸ್ಕೂಡಾ ಕಾರು, ಮತ್ತೊಂದು ಕಾರಿನ ನಡುವೆ ಅಪಘಾತ ಉಂಟಾಗಿ ಸರಣಿ ಅಪಘಾತ ಸಂಭವಿಸಿದೆ. ಇನ್ನು ಈ ಅಪಘಾತದಿಂದ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಿಂದ ಮೂರು ಕಾರುಗಳು ಜಖಂಗೊಂಡಿವೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದೆಡೆ ರಾಮಮೂರ್ತಿ ನಗರದ ರಿಂಗ್‍ ರಸ್ತೆಯಲ್ಲಿ ನಿನ್ನೆ ಮಧ್ಯರಾತ್ರಿ ರಸ್ತೆಬದಿ ನಿಂತಿದ್ದ ಕ್ಯಾಂಟರ್‍ ಗೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದು ಚಾಲಕ ಮೃತಪಟ್ಟರೆ, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಗೌರಿಬಿದನೂರಿನ ವೆಂಕಟೇಶ್ (21)ಎಂದು ಮೃತಪಟ್ಟ ಲಾರಿ ಚಾಲಕನನ್ನು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡಿರುವ ಶಶಿಕುಮಾರ್ (35)ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ.

ಡಿಕ್ಕಿಯ ರಭಸಕ್ಕೆ ಚಾಲಕ ವೆಂಕಟೇಶ್ ಮೃತಪಟ್ಟಿದ್ದು, ಅವರ ಪಕ್ಕದಲ್ಲಿದ್ದ ಶಶಿಕುಮಾರ್ ಗಾಯಗೊಂಡರು. ಪ್ರಕರಣ ದಾಖಲಿಸಿರುವ ಕೆ.ಆರ್.ಪುರಂ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

accident kims ವೈದ್ಯಕೀಯ ರಿಂಗ್‍ ರಸ್ತೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ