‘ಆಪರೇಷನ್ ಅಮ್ಮಾ’ ಹೆಸರಲ್ಲಿ ನಡೆದಿತ್ತು ಹತ್ಯೆ!

Gauri lankesh murder:

16-06-2018

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಗೆ ಅಮೋಲ್ ಕಾಳೆಯೇ ಸಂಚಿನ ಸೂತ್ರಧಾರನಾದರೇ ಗುಂಡಿಕ್ಕಿದ್ದು ಸಿಂದಗಿಯ ಪರಶುರಾಮ್ ವಾಘ್ಮೋರೆ ಎನ್ನುವುದು ಈವರೆಗಿನ ವಿಶೇಷ ತನಿಖಾ ತಂಡ(ಎಸ್‍ಐಟಿ)ತನಿಖೆಯಲ್ಲಿ ಖಚಿತವಾಗಿದೆ.

ಕೃತ್ಯದಲ್ಲಿ ಭಾಗಿಯಾಗಿರುವ ನಿಹಾಲ್ ಅಲಿಯಾಸ್ ದಾದಾ ಸೇರಿದಂತೆ ಇನ್ನೂ ಮೂವರು ಆರೋಪಿಗಳು ಸಿಕ್ಕರೆ ಗೌರಿ ಹತ್ಯೆ ಪ್ರಕರಣದ ತನಿಖೆ ಪೂರ್ಣಗೊಳ್ಳಲಿದೆ ಎಂದು ಎಸ್‍ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿದ್ದ ಅಮೋಲ್‍ಗೆ ರಾಜ್ಯದಲ್ಲಿ ಹಿಂದುತ್ವದ ವಿರುದ್ಧ ಯಾರ್ಯಾರು ಮಾತನಾಡುತ್ತಿದ್ದರು ಎನ್ನುವ ಪಟ್ಟಿಯನ್ನು ಕರ್ನಾಟಕದ ವ್ಯಕ್ತಿಯೇ ಆತನಿಗೆ ತಯಾರಿಸಿ ಕೊಟ್ಟಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

ಹಿಂದೂ ವಿರೋಧಿಗಳಾಗಿದ್ದ ಸಾಹಿತಿಗಳು, ಸ್ವಾಮೀಜಿಗಳು ಸೇರಿದಂತೆ ರಾಜ್ಯದ ಹತ್ತು ಮಂದಿಯ ಹೆಸರುಗಳನ್ನು ಆತನೇ ಬರೆದುಕೊಟ್ಟಿರುವ ಶಂಕೆ ಬಲವಾಗಿದೆ. ನಂತರ ಅಮೋಲ್ ಬೇರೆ ರಾಜ್ಯಗಳ ಇನ್ನೂ 16 ಮಂದಿ ಚಿಂತಕರ ಹೆಸರುಗಳನ್ನು ಆ ಪಟ್ಟಿಗೆ ಸೇರಿಸಿಕೊಂಡಿರುವುದು ಹಿಟ್‍ ಲಿಸ್ಟ್ ಕೊಟ್ಟವನ ವಿವರವನ್ನು ಪತ್ತೆ ಮಾಡಲು ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.

ಕೋಡ್‍ ವರ್ಡ್ ಅಮ್ಮಾ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಹಂತಕರು `ಆಪರೇಷನ್ ಅಮ್ಮಾ' ಎಂಬ ಕೋಡ್ ವರ್ಡ್ ಬಳಸಿದ್ದರು ಹತ್ಯೆಯ ಸಂಚು `ಅಮ್ಮ'ಹೆಸರಿನಲ್ಲಿ ನಡೆದಿದೆ, ಹತ್ಯೆಗೂ ಮುನ್ನ ಯೋಜನೆ ನಡೆಸುವ ವೇಳೆ ಗೌರಿ ಲಂಕೇಶ್ ಹೆಸರು ಹೇಳದೆ ಅಮ್ಮ ಎಂದು ಬಳಸುತ್ತಿದ್ದರು. ಹತ್ಯೆಯ ಬಗ್ಗೆ ಯಾರಿಗೂ ಸುಳಿವು ಸಿಗಬಾರದು ಎನ್ನುವ ಉದ್ದೇಶದಿಂದ ಈ ಪದವನ್ನು ಕೋಡ್‍ಆಗಿ ಬಳಸಿದ್ದರು.

ಪ್ರಮುಖವಾಗಿ ಗೌರಿ ಅವರ ಹತ್ಯೆಗೂ ಮುನ್ನ ಆರೋಪಿಗಳಿಗೆ ಕುರಿತು ಸುಳಿವು ಸಿಗಬಾರದು ಎಂಬ ಉದ್ದೇಶದಿಂದ ಕೋರ್ಡ್ ವಾರ್ಡ್‍ಗಳನ್ನು ಬಳಕೆ ಮಾಡಲಾಗುತ್ತಿತ್ತು. ಅದ್ದರಿಂದಲೇ ಹತ್ಯೆಗೂ ಮುನ್ನ ಆರೋಪಿಗಳಿಗೆ ಗೌರಿ ಅವರ ಕುರಿತು ಮಾಹಿತಿ ನೀಡಿರಲಿಲ್ಲ. ಈ ಕುರಿತು ಎಸ್‍ಐಟಿ ಅಧಿಕಾರಿಗಳು ಆರೋಪಿಗಳಿಂದ ಜಪ್ತಿಯಾದ ಡೈರಿಯಲ್ಲಿ ಬಹುತೇಕ ಕೋಡ್‍ವರ್ಡ್ ಪತ್ತೆಯಾಗಿದೆ

ಸಂವಹನಕ್ಕೂ ಕೋಡ್‍ವರ್ಡ್: ಹತ್ಯೆ ಸಂಚು ರೂಪಿಸುವ ವೇಳೆಯೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳಿಗೂ ಸಂವಹನ ನಡೆಸಲು ಕೋಡ್ ವರ್ಡ್‍ಗಳನ್ನೇ ಬಳಕೆ ಮಾಡುತ್ತಿದ್ದರು. ಮೊಬೈಲ್ ನಂಬರ್, ಭೇಟಿಯಾಗುವ ಸ್ಥಳಕ್ಕೂ ಕೋಡ್‍ವರ್ಡ್ ನಿಗಧಿಯಾಗಿತ್ತು. ಎಲ್ಲಾ ಕೋಡ್‍ವರ್ಡ್‍ಗಳನ್ನು ಮರಾಠಿ ಮಿಶ್ರಿತ ಅಕ್ಷರಗಳಲ್ಲಿರುವ ಬಳಕೆ ಮಾಡಲಾಗುತ್ತಿತ್ತು. ಪ್ರಕರಣದಲ್ಲಿ ಯಾವುದೇ ಸುಳಿವು ಸಿಗಬಾರದು ಎಂಬ ಉದ್ದೇಶಕ್ಕೆ ಈ ಕೋಡ್‍ವರ್ಡ್ ಬಳಕೆ ಮಾಡಿದ್ದು, ಬಹುತೇಕ ಕೋಡ್‍ಗಳನ್ನು ಎಸ್‍ಐಟಿ ತಂಡ ಬಹುತೇಕ ಡಿಕೋಡ್ ಮಾಡಿದೆ.

ಕುಟುಂಬ ವಿಚಾರಣೆ: ಈ ನಡುವೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಎಸ್‍ಐಟಿ ಅಧಿಕಾರಿಗಳು ಬಂಧಿಸಿರುವ ಆರೋಪಿ ಪರಶುರಾಮ್ ವಾಗ್ಮೋರೆ ಅವರ ತಂದೆ ಆಶೋಕ್ ವಾಘ್ಮೋರೆ ಕುಟುಂಬ ನಗರಕ್ಕೆ ಬಂದಿದ್ದು ಎಸ್‍ಐಟಿ ಅಧಿಕಾರಿಗಳು  ವಿಚಾರಣೆ ನಡೆಸಿದ್ದಾರೆ. ಪರಶುರಾಮ್ ವಾಗ್ಮೋರೆ ತಂದೆ ಅಶೋಕ ವಾಗ್ಮೋರೆ, ತಾಯಿ ಜಾನಕಿಬಾಯಿ, ಮಾವ ಅಶೋಕ ಕಾಂಬಳೆ ಅವರನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ. ಪತ್ರಕರ್ತೆ ಗೌರಿ ಹತ್ಯೆ ಸಂಬಂಧ ಬಂಧಿತರಾಗಿರುವ ಹಂತಕರ ಹಿಟ್ ಲಿಸ್ಟ್ ನಲ್ಲಿ  ಕೆ.ಎಸ್.ಭಗವಾನ್, ನಿಡುಮಾಮಿಡಿ ಸ್ವಾಮೀಜಿ, ಗಿರೀಶ್ ಕಾರ್ನಾಡ್. ಸಿ.ಎಸ್.ದ್ವಾರಕನಾಥ್ ಸೇರಿ ಹತ್ತು ಮಂದಿ ಇದ್ದರು ಎಂದು ತಿಳಿದುಬಂದಿದೆ.

ಹಿಟ್‍ ಲಿಸ್ಟ್: ರಾಜ್ಯದಲ್ಲಿ ಹಿಂದುತ್ವದ ವಿರುದ್ಧ ಮಾತನಾಡುತ್ತಿದ್ದ ಪ್ರಗತಿಪರರ ಹಿಟ್‍ ಲಿಸ್ಟ್ ಮಾಡಿಕೊಂಡಿದ್ದ ಆರೋಪಿಗಳು ಮೊದಲಿಗೆ ಭಗವಾನ್ ಹತ್ಯೆಗೆ ಸಂಚು ರೂಪಿಸಿರುವುದು ಕಂಡುಬಂದಿದೆ ಎಂದು ವಿಶೇಷ ತನಿಖಾ ತಂಡ(ಎಸ್‍ಐಟಿ)ದ ಮೂಲಗಳು ತಿಳಿಸಿವೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ